ADVERTISEMENT

ಮೊಹಮ್ಮದ್‌ ಶಮಿಗೆ ಸಮನ್ಸ್‌

ಪಿಟಿಐ
Published 14 ನವೆಂಬರ್ 2018, 17:42 IST
Last Updated 14 ನವೆಂಬರ್ 2018, 17:42 IST

ಕೋಲ್ಕತ್ತ: ಚೆಕ್‌ ಬೌನ್ಸ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ವಿಚಾರಣೆಗಾಗಿ ಜನವರಿ 15ರೊಳಗೆ ಖುದ್ದಾಗಿ ನ್ಯಾಯಾಲಯಕ್ಕೆ ಹಾಜರಾಗುವಂತೆ ಭಾರತ ಕ್ರಿಕೆಟ್‌ ತಂಡದ ಆಟಗಾರ ಮೊಹಮ್ಮದ್‌ ಶಮಿ ಅವರಿಗೆ ಇಲ್ಲಿನ ಚೀಫ್‌ ಜ್ಯುಡಿಷಿಯಲ್‌ ಮ್ಯಾಜಿಸ್ಟ್ರೇಟ್‌ ಕೋರ್ಟ್‌ ಬುಧವಾರ ಸಮನ್ಸ್‌ ಜಾರಿ ಮಾಡಿದೆ.

ಒಂದೊಮ್ಮೆ ಶಮಿ, ವಿಚಾರಣೆಗೆ ಗೈರಾದರೆ ಅವರ ಬಂಧನಕ್ಕೆ ವಾರೆಂಟ್‌ ಜಾರಿ ಮಾಡಲಾಗುವುದು ಎಂದು ಅಲಿಪುರ್‌ ಜ್ಯುಡಿಷಿಯಲ್‌ ಮ್ಯಾಜಿಸ್ಟ್ರೇಟ್‌ ಮೊಹಮ್ಮದ್‌ ಜಾಫರ್‌ ಪರ್ವೇಜ್‌ ಹೇಳಿದ್ದಾರೆ.

ಶಮಿ, ಮಾಸಿಕ ಜೀವನಾಂಶ ನೀಡುತ್ತಿದ್ದು, ಅವರು ಕೊಟ್ಟಿದ್ದ ಚೆಕ್‌, ಬೌನ್ಸ್‌ ಆಗಿದೆ ಎಂದು ಪತ್ನಿ ಹಸೀನ ಜಹಾನ್‌ ಇತ್ತೀಚೆಗೆ ದೂರು ದಾಖಲಿಸಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.