ADVERTISEMENT

ಭಾರತ - ದಕ್ಷಿಣ ಆಫ್ರಿಕಾ ಮೊದಲ ಟೆಸ್ಟ್‌ಗೆ ಮಳೆ ಸಾಧ್ಯತೆ

ಪಿಟಿಐ
Published 30 ಸೆಪ್ಟೆಂಬರ್ 2019, 19:06 IST
Last Updated 30 ಸೆಪ್ಟೆಂಬರ್ 2019, 19:06 IST

ವಿಶಾಖಪಟ್ಟಣ: ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಣ ಬುಧವಾರ ಇಲ್ಲಿ ಆರಂಭವಾಗಲಿರುವ ಮೊದಲ ಕ್ರಿಕೆಟ್‌ ಟೆಸ್ಟ್‌ ಪಂದ್ಯಕ್ಕೆ ಮಳೆ ಅಡ್ಡಿಯಾಗುವ ಸಾಧ್ಯತೆ ಇದೆ. ಎಲ್ಲ ಐದೂ ದಿನ ಮಳೆಯಾಗುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಒಂದು ವಾರದಿಂದ ಇಲ್ಲಿ ಮಳೆಯಾಗುತ್ತಿದೆ. ಸರಣಿಯ ಮೊದಲ ಪಂದ್ಯದ ಆರಂಭದ ದಿನ ಮಳೆಯಾಗುವ ಸಾಧ್ಯತೆ ಶೇ 80ರಷ್ಟು ಇದೆ. ಉಳಿದ ನಾಲ್ಕು ದಿನಗಳಂದೂ ಮಳೆಯ ಸಾಧ್ಯತೆ ಶೇ 50ರಷ್ಟಿದೆ.

ಇಲ್ಲಿಂದ 50 ಕಿ.ಮೀ. ದೂರದ ವಿಜಿಯನಗರಂನಲ್ಲಿ ದಕ್ಷಿಣ ಆಫ್ರಿಕ ಮತ್ತು ಮಂಡಳಿ ಅಧ್ಯಕ್ಷರ ಇಲೆವೆನ್‌ ನಡುವಣ ಪಂದ್ಯದ ಮೊದಲ ದಿನ ದಾಟ ಮಳೆಗೆ ಕೊಚ್ಚಿಹೋಗಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.