ADVERTISEMENT

ದ್ರಾವಿಡ್ ಕೋಚಿಂಗ್ ಶೈಲಿ ಬಗ್ಗೆ ಮಾತನಾಡಲು ಇದು ಸಮಯವಲ್ಲ: ಆರ್. ಅಶ್ವಿನ್

ಪಿಟಿಐ
Published 18 ನವೆಂಬರ್ 2021, 5:33 IST
Last Updated 18 ನವೆಂಬರ್ 2021, 5:33 IST
ಆರ್‌. ಅಶ್ವಿನ್: ಪಿಟಿಐ ಚಿತ್ರ
ಆರ್‌. ಅಶ್ವಿನ್: ಪಿಟಿಐ ಚಿತ್ರ   

ಜೈಪುರ: ರಾಹುಲ್ ದ್ರಾವಿಡ್ ಅವರ ಕೋಚಿಂಗ್ ಶೈಲಿಯ ಬಗ್ಗೆ ಈಗ ಮಾತನಾಡುವುದು ತುಂಬಾ ಬೇಗ ಅನಿಸುತ್ತದೆ ಎಂದು ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಹೇಳಿದ್ದಾರೆ.

ನಮ್ಮ ಶ್ರೇಷ್ಠ ಕ್ರಿಕೆಟಿಗರಾದ ದ್ರಾವಿಡ್ ಮಾರ್ಗದರ್ಶನದಲ್ಲಿ ಡ್ರೆಸಿಂಗ್ ರೂಮ್‌ನಲ್ಲಿ ಸಂತಸದ ವಾತಾವರಣವಿರಲಿದೆ ಎಂಬ ವಿಶ್ವಾಸವಂತೂ ಇದೆ ಎಂದು ಅವರು ಹೇಳಿದ್ದಾರೆ.

ನ್ಯೂಜಿಲೆಂಡ್ ವಿರುದ್ಧ ನಡೆಯುತ್ತಿರುವ ಟಿ–20 ಸರಣಿ ಮೂಲಕ ದ್ರಾವಿಡ್, ಭಾರತ ತಂಡದ ನೂತನ ಕೋಚ್ ಆಗಿ ಕೆಲಸ ಆರಂಭಿಸಿದ್ದಾರೆ.

ADVERTISEMENT

ಇತ್ತೀಚೆಗೆ ಮುಗಿದ ಟಿ–20 ವಿಶ್ವಕಪ್‌ ಸರಣಿ ಮೂಲಕ ತಂಡಕ್ಕೆ ಕಮ್‌ಬ್ಯಾಕ್ ಮಾಡಿದ್ದ 35 ವರ್ಷದ ಆರ್. ಅಶ್ವಿನ್, ಸದ್ಯ ನಡೆಯುತ್ತಿರುವ ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲೂ ಸ್ಥಾನ ಪಡೆದಿದ್ದಾರೆ.

‘ರಾಹುಲ್ ದ್ರಾವಿಡ್ ಅವರ ಕೋಚಿಂಗ್ ಶೈಲಿ ಬಗ್ಗೆ ಈಗ ಮಾತನಾಡುವುದು ತುಂಬಾ ಬೇಗ ಅನಿಸುತ್ತದೆ. 19 ವರ್ಷದೊಳಗಿನ ತಂಡಕ್ಕೆ ಅವರು ಪರಿಶ್ರಮಪಟ್ಟಿದ್ದಾರೆ’ ಎಂದು ನ್ಯೂಜಿಲೆಂಡ್ ವಿರುದ್ಧದ ಮೊದಲ ಟಿ–20 ಪಂದ್ಯದಲ್ಲಿ ಭಾರತ ಜಯಗಳಿಸಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡುತ್ತಾ ಅಶ್ವಿನ್ ಹೇಳಿದ್ದಾರೆ.

'ಅವರು ಹೆಚ್ಚು ಚಾನ್ಸ್ ತೆಗೆದುಕೊಳ್ಳುವುದಿಲ್ಲ. ತಯಾರಿ ಮತ್ತು ನಿರ್ವಹಣೆ ಬಗ್ಗೆ ಗಮನಹರಿಸುತ್ತಾರೆ. ಅವರ ಮಾರ್ಗದರ್ಶನದ ಮೂಲಕ ಡ್ರೆಸಿಂಗ್ ರೂಮಲ್ಲಿ ಸಂತಸದ ವಾತಾವರಣವಿರಲಿದೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.