ADVERTISEMENT

ಮಹಿಳೆಯರ ಟ್ವೆಂಟಿ–20 ಪಂದ್ಯ ರದ್ದು

ಪಿಟಿಐ
Published 29 ಸೆಪ್ಟೆಂಬರ್ 2019, 20:01 IST
Last Updated 29 ಸೆಪ್ಟೆಂಬರ್ 2019, 20:01 IST

ಸೂರತ್: ಭಾರತ ಮತ್ತು ದಕ್ಷಿಣ ಆಫ್ರಿಕಾ ಮಹಿಳಾ ತಂಡಗಳ ನಡುವೆ ಇಲ್ಲಿ ನಡೆಯಬೇಕಾಗಿದ್ದ ಮೂರನೇ ಟ್ವೆಂಟಿ–20 ಕ್ರಿಕೆಟ್ ಪಂದ್ಯವನ್ನು ಮಳೆಯ ಕಾರಣ ರದ್ದು ಮಾಡಲಾಯಿತು.

ಸಂಜೆ 7 ಗಂಟೆಗೆ ಪಂದ್ಯ ಆರಂಭವಾಗಬೇಕಾಗಿತ್ತು. ಆದರೆ ಪರಿಸ್ಥಿತಿ ಅನುಕೂಲಕರ ಆಗಿರದ ಕಾರಣ ಟಾಸ್ ಕೂಡ ಹಾಕದೆ ರದ್ದು ಮಾಡಲು ನಿರ್ಧರಿಸಲಾಯಿತು.

ಗುರುವಾರ ನಡೆಯಬೇಕಾಗಿದ್ದ ಎರಡನೇ ಪಂದ್ಯವನ್ನೂ ರದ್ದು ಮಾಡಲಾಗಿತ್ತು. 5 ಪಂದ್ಯಗಳ ಸರಣಿಯ ಮೊದಲ ಪಂದ್ಯವನ್ನು ಭಾರತ ಗೆದ್ದುಕೊಂಡಿತ್ತು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.