ADVERTISEMENT

ಮಹಿಳಾ ಟಿ20 ವಿಶ್ವಕಪ್: ಅಂಪೈರ್ ನಿತಿನ್ ಮೆನನ್ ನೇಮಕ

ಪಿಟಿಐ
Published 12 ಫೆಬ್ರುವರಿ 2020, 15:44 IST
Last Updated 12 ಫೆಬ್ರುವರಿ 2020, 15:44 IST
ಅಂಪೈರ್ ನಿತಿನ್ ಮೆನನ್
ಅಂಪೈರ್ ನಿತಿನ್ ಮೆನನ್   

ದುಬೈ: ಇದೇ ತಿಂಗಳು ನಡೆಯಲಿರುವ ಮಹಿಳೆಯರ ಟ್ವೆಂಟಿ–20 ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಕಾರ್ಯನಿರ್ವಹಿಸಲು ಭಾರತದ ನಿತಿನ್ ಮೆನನ್ ನೇಮಕವಾಗಿದ್ದಾರೆ.

36 ವರ್ಷದ ನಿತಿನ್ ಅವರು ಮಧ್ಯಪ್ರದೇಶದ ಇಂದೋರ್‌ನವರಾಗಿದ್ದಾರೆ. ಈ ಟೂರ್ನಿಯಲ್ಲಿ ಅಂಪೈರ್ ಆಗಿ ಕಾರ್ಯನಿರ್ವಹಿಸಲಿರುವ ಭಾರತದ ಎರಡನೇ ವ್ಯಕ್ತಿ ಅವರಾಗಿದ್ದಾರೆ. ಭಾರತದ ಜಿ.ಎಸ್‌. ಲಕ್ಷ್ಮೀ ಅವರನ್ನು ಈ ಹಿಂದೆಯೇ ನೇಮಕ ಮಾಡಲಾಗಿದೆ.

ಈ ಟೂರ್ನಿಯಲ್ಲಿ ಒಟ್ಟು ಆರು ಮಂದಿ ಮಹಿಳಾ ಅಂಪೈರ್‌ಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಲಾರೆನ್ ಏಜನ್‌ಬ್ಯಾಗ್, ಕಿಮ್ ಕಾಟನ್, ಕ್ಲೇರ್ ಪೊಲೊಸ್ಯಾಕ್, ಸೂ ರೆಡ್‌ಫರ್ನ್ ಮತ್ತು ಜ್ಯಾಕ್ಲಿನ್ ವಿಲಿಯಮ್ಸ್‌ ಅವರು ಈ ಪ್ಯಾನೆಲ್‌ನಲ್ಲಿದ್ದಾರೆ.

ADVERTISEMENT

ಐಸಿಸಿ ಎಲೀಟ್ ಪ್ಯಾನೆಲ್‌ನ ಮ್ಯಾಚ್ ರೆಫರಿ ಕ್ರಿಸ್ ಬ್ರಾಡ್, ಸ್ಟೀವ್ ಬರ್ನಾರ್ಡ್, ಅಂಪೈರ್‌ಗಳಾದ ಗ್ರೆಗರಿ ಬ್ರಾಥ್‌ವೇಟ್, ಕ್ರಿಸ್ ಬ್ರೌನ್, ಎಹಸಾನ್ ರಝಾ, ಲಾಂಗ್ಟನ್ ರುಸೆರ್ ಮತ್ತು ಅಲೆಕ್ಸ್‌ ವಾರ್ಫ್‌ ಕೂಡ ಕಾರ್ಯನಿರ್ವಹಿಸುವರು. ಇವರೆಲ್ಲರೂ ಲೀಗ್ ಹಂತದ ಪಂದ್ಯಗಳಲ್ಲಿ ಕೆಲಸ ಮಾಡುವರು. ಸೆಮಿಫೈನಲ್‌ನಲ್ಲಿ ಕಾರ್ಯನಿರ್ವಹಿಸುವ ಅಂಪೈರ್‌ಗಳನ್ನು ನಂತರ ಪ್ರಕಟಿಸಲಾಗುವುದು ಎಂದು ಐಸಿಸಿ ಪ್ರಕಟಣೆಯಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.