ಕ್ರಿಕೆಟ್
(ಸಾಂಕೇತಿಕ ಚಿತ್ರ)
ಕೊಲಂಬೊ: ಭಾರತ ಮತ್ತು ಶ್ರೀಲಂಕಾ ತಂಡಗಳನ್ನು ಒಳಗೊಂಡಂತೆ ಮಹಿಳಾ ಏಕದಿನ ಕ್ರಿಕೆಟ್ ತ್ರಿಕೋನ ಸರಣಿಯ ವೇಳಾಪಟ್ಟಿಯಲ್ಲಿ ಶ್ರೀಲಂಕಾ ಕ್ರಿಕೆಟ್ (ಎಸ್‌ಎಲ್‌ಸಿ) ಮಂಗಳವಾರ ಬದಲಾವಣೆಗಳನ್ನು ಮಾಡಿದೆ. ಸ್ಥಳೀಯ ಚುನಾವಣೆಗಳ ಕಾರಣ ವೇಳಾಪಟ್ಟಿ
ಪರಿಷ್ಕರಿಸಲಾಗಿದೆ.
ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ತಮ್ಮ ಎರಡನೇ ಏಕದಿನ ಪಂದ್ಯವನ್ನು ಮೇ 7ರಂದು ಆಡಲಿದೆ. 6ರಂದು ಕೊಲಂಬೊದಲ್ಲಿ ಚುನಾವಣೆಯಿರುವ ಕಾರಣ ಪಂದ್ಯವನ್ನು ಒಂದು ದಿನ ಮುಂದೂಡಲಾಗಿದೆ.
ಎಲ್ಲ ಪಂದ್ಯಗಳು ಹಗಲು ಹೊತ್ತಿನಲ್ಲಿ ನಡೆಯಲಿದ್ದು, ರಣಸಿಂಘೆ ಪ್ರೇಮದಾಸ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಿಗದಿಯಾಗಿವೆ. ಫೈನಲ್ ಪಂದ್ಯ ಮೇ 11ರಂದು ನಡೆಯಲಿದೆ.
ಪರಿಷ್ಕೃತ ವೇಳಾಪಟ್ಟಿ ಇಂತಿದೆ: ಏ 27: ಶ್ರೀಲಂಕಾ– ಭಾರತ; ಏ. 29: ಭಾರತ– ದಕ್ಷಿಣ ಆಫ್ರಿಕಾ; ಮೇ 2: ಶ್ರೀಲಂಕಾ– ದಕ್ಷಿಣ ಆಫ್ರಿಕಾ; ಮೇ 4: ಶ್ರೀಲಂಕಾ –ಭಾರತ; ಮೇ 7: ಭಾರತ– ದಕ್ಷಿಣ ಆಫ್ರಿಕಾ; ಮೇ 9: ಶ್ರೀಲಂಕಾ–ದಕ್ಷಿಣ ಆಫ್ರಿಕಾ. ಮೇ 11: ಫೈನಲ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.