ADVERTISEMENT

ನಿಧಾನಗತಿ ಓವರ್: ಕಿವೀಸ್‌ ತಂಡಕ್ಕೆ ದಂಡ

​ಪ್ರಜಾವಾಣಿ ವಾರ್ತೆ
Published 23 ಜೂನ್ 2019, 18:27 IST
Last Updated 23 ಜೂನ್ 2019, 18:27 IST

ಲಂಡನ್‌ (ರಾಯಿಟರ್ಸ್‌): ಓಲ್ಡ್ ಟ್ರಾಫರ್ಡ್‌ನಲ್ಲಿ ಶನಿವಾರ ವೆಸ್ಟ್‌ ಇಂಡೀಸ್‌ ವಿರುದ್ಧ ಪಂದ್ಯದಲ್ಲಿ ನಿಧಾನಗತಿಯಲ್ಲಿ ಓವರುಗಳನ್ನು ಮಾಡಿದ್ದಕ್ಕೆ ನ್ಯೂಜಿಲೆಂಡ್‌ ತಂಡಕ್ಕೆ ದಂಡ ವಿಧಿಸಲಾಗಿದೆ ಎಂದು ಐಸಿಸಿ ಭಾನುವಾರ ತಿಳಿಸಿದೆ.

ನಿಗದಿ ಅವಧಿಯಲ್ಲಿ ಲೆಕ್ಕಾಚಾರ ಹಾಕಿದ ಮೇಲೆ ನ್ಯೂಜಿಲೆಂಡ್‌ ಒಂದು ಓವರ್‌ ಕಡಿಮೆ ಮಾಡಿದ್ದು ಸ್ಪಷ್ಟವಾಗಿದೆ ಎಂದು ಮ್ಯಾಚ್‌ ರೆಫ್ರಿ ಡೇವಿಡ್‌ ಬೂನ್‌ ಅಭಿಪ್ರಾಯಪಟ್ಟಿದ್ದಾರೆ.ನಾಯಕ ಕೇನ್‌ ವಿಲಿಯಮ್ಸನ್‌ ತಪ್ಪೊಪ್ಪಿಕೊಂಡಿದ್ದು, ಪಂದ್ಯ ಸಂಭಾವನೆಯ ಶೇ 20ರಷ್ಟು ದಂಡ ವಿಧಿಸಲಾಗಿದೆ. ತಂಡದ ಇತರ ಆಟಗಾರರಿಗೆ ಶೇ 10ರಷ್ಟು ದಂಡ ವಿಧಿಸಲಾಗಿದೆ.

ರೋಮಾಂಚಕಾರಿಯಾಗಿ ಮುಕ್ತಾಯಗೊಂಡ ಪಂದ್ಯದಲ್ಲಿ ವಿಂಡೀಸರ ವಿರುದ್ಧ ಜಯಗಳಿಸಿದ ನ್ಯೂಜಿಲೆಂಡ್‌ ಸೆಮಿಫೈನಲ್‌ ಸಾಧ್ಯತೆ ಉಜ್ವಲಗೊಳಿಸಿದೆ. ಅದು ತನ್ನ ಮುಂದಿನ ಪಂದ್ಯವನ್ನು ಬುಧವಾರ ಪಾಕಿಸ್ತಾನ ವಿರುದ್ಧ ಆಡಬೇಕಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.