ADVERTISEMENT

ಎಎಫ್‌ಸಿ ಫುಟ್‌ಬಾಲ್‌: ಭಾರತ ಜಯಭೇರಿ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2022, 12:35 IST
Last Updated 6 ಅಕ್ಟೋಬರ್ 2022, 12:35 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಅಲ್‌ ಖೊಬರ್‌, ಸೌದಿ ಅರೇಬಿಯಾ (ಪಿಟಿಐ): ಭಾರತ ತಂಡದವರು ಎಎಫ್‌ಸಿ 17 ವರ್ಷದೊಳಗಿನವರ ಏಷ್ಯಾ ಕಪ್‌ ಫುಟ್‌ಬಾಲ್‌ ಅರ್ಹತಾ ಟೂರ್ನಿಯಲ್ಲಿ ಗೆಲುವಿನ ಓಟ ಮುಂದುವರಿಸಿದ್ದಾರೆ.

ಗುರುವಾರ ನಡೆದ ಪಂದ್ಯದಲ್ಲಿ ಭಾರತ 3–0 ಗೋಲುಗಳಿಂದ ಕುವೈತ್ ತಂಡವನ್ನು ಪರಾಭವಗೊಳಿಸಿತು. ಮೊದಲ ಪಂದ್ಯದಲ್ಲಿ ಭಾರತ 5–0 ರಲ್ಲಿ ಮಾಲ್ಡೀವ್ಸ್‌ ಎದುರು ಗೆದ್ದಿತ್ತು.

ತಾಂಗ್‌ಲಾಲ್‌ಸುನ್‌ ಗಾಂಗ್ಟೆ (16 ಮತ್ತು 70ನೇ ನಿ.) ಅವರು ಎರಡು ಗೋಲುಗಳನ್ನು ಗಳಿಸಿ ಭಾರತದ ಗೆಲುವಿನ ರೂವಾರಿ ಎನಿಸಿಕೊಂಡರು. ಮತ್ತೊಂದು ಗೋಲನ್ನು ಕೊರೊ ಸಿಂಗ್‌ ತಿಂಗುಜಮ್ (66ನೇ ನಿ.) ಗಳಿಸಿದರು. ಈ ಗೆಲುವಿನ ಮೂಲಕ ಬಿಬಿಯಾನೊ ಫೆರ್ನಾಂಡೆಸ್‌ ಬಳಗ ಮೂರು ಪಾಯಿಂಟ್‌ ಕಲೆಹಾಕಿತು.

ADVERTISEMENT

ಭಾರತ ತಂಡದ ಗೋಲ್‌ಕೀಪರ್‌ ಸಾಹಿಲ್‌ ಅವರು ಎದುರಾಳಿ ತಂಡದ ಗೋಲು ಗಳಿಸುವ ಹಲವು ಪ್ರಯತ್ನಗಳನ್ನು ತಡೆದು ಮಿಂಚಿದರು.

ಭಾರತ ತಂಡ ತನ್ನ ಮುಂದಿನ ಪಂದ್ಯದಲ್ಲಿ ಮಯನ್ಮಾರ್‌ ಎದುರು ಪೈಪೋಟಿ ನಡೆಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.