ADVERTISEMENT

ಫುಟ್‌ಬಾಲ್‌: ಮತ್ತೆ ಗೋವಾ ತಂಡಕ್ಕೆ ಮಾರ್ಕ್ವೆಝ್

​ಪ್ರಜಾವಾಣಿ ವಾರ್ತೆ
Published 18 ಜುಲೈ 2025, 16:11 IST
Last Updated 18 ಜುಲೈ 2025, 16:11 IST
ಮನೊಲೊ ಮಾರ್ಕ್ವೆಝ್
ಮನೊಲೊ ಮಾರ್ಕ್ವೆಝ್   

ನವದೆಹಲಿ: ಭಾರತ ಪುರುಷರ ಫುಟ್‌ಬಾಲ್‌ ತಂಡದ ಮುಖ್ಯ ಕೋಚ್ ಹುದ್ದೆಯಿಂದ ಕೆಳಗಿಳಿದ ಮನೊಲೊ ಮಾರ್ಕ್ವೆಝ್ ಅವರು 2025-26ರ ಋತುವಿಗಾಗಿ ಎಫ್‌ಸಿ ಗೋವಾವನ್ನು ಮತ್ತೆ ಸೇರಿಕೊಂಡಿದ್ದಾರೆ.

ಭಾರತ ಫುಟ್‌ಬಾಲ್ ತಂಡ ಸತತವಾಗಿ ಹಿನ್ನಡೆ ಕಾಣುತ್ತಿದ್ದ ಪರಿಣಾಮ ಈ ತಿಂಗಳ ಆರಂಭದಲ್ಲಿ ಸ್ಪೇನ್‌ನ ಮಾರ್ಕ್ವೆಝ್ ಪದತ್ಯಾಗ ಮಾಡಿದ್ದರು. 

ಮುಂಬರುವ ಋತುವಿಗೆ 56 ವರ್ಷದ ಮಾರ್ಕ್ವೆಝ್ ಮುಖ್ಯ ಕೋಚ್ ಆಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಎಫ್‌ಸಿ ಗೋವಾ ಘೋಷಿಸಿದೆ. ಅವರು ಭಾರತ ತಂಡಕ್ಕೆ ಕೋಚ್ ಆಗುವ ಮುನ್ನ ಗೋವಾ ತಂಡಕ್ಕೆ ಮಾರ್ಗದರ್ಶನ ನೀಡಿದ್ದರು. 

ADVERTISEMENT

2024ರ ಜೂನ್‌ನಲ್ಲಿ ಎರಡು ವರ್ಷಗಳ ಅವಧಿಗೆ ಮಾರ್ಕ್ವೆಝ್‌ ಅವರನ್ನು ಭಾರತ ತಂಡದ ಹೆಡ್‌ ಕೋಚ್‌ ಆಗಿ ನೇಮಕ ಮಾಡಲಾಗಿತ್ತು. ಆದರೆ, ಜುಲೈ 2ರಂದು ಭಾರತ ಫುಟ್‌ಬಾಲ್‌ ಫೆಡರೇಷನ್ (ಎಐಎಫ್‌ಎಫ್‌) ಜೊತೆ ‘ಪರಸ್ಪರ ಸಮ್ಮತಿ’ಯ ಮೇರೆಗೆ ಅವರು ಪದತ್ಯಾಗ ಮಾಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.