ಫುಟ್‌ಬಾಲ್
ಬೆಂಗಳೂರು: ಎಜಿಒಆರ್‌ಸಿ ತಂಡ, ಬಿಡಿಎಫ್‌ಎ ಎ ಡಿವಿಷನ್ ಲೀಗ್ ಪಂದ್ಯದಲ್ಲಿ ಜವಾಹರ್ ಯೂನಿಯನ್ ಎಫ್‌ಸಿ ತಂಡವನ್ನು 2–1 ಗೋಲುಗಳಿಂದ ಜಯಿಸಿತು.
ಅಶೋಕನಗರದ ಬೆಂಗಳೂರು ಫುಟ್‌ಬಾಲ್ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಎಜಿಒಆರ್‌ಸಿ ತಂಡದ ಪರ ಜೈಕುಮಾರ್ (36ನೇ, 47ನೇ ನಿ.) ಗೋಲು ಗಳಿಸಿದರು. ಜವಾಹರ್ ತಂಡದ ಪರ ಅನ್ಶ್ ಭಂಬಾನಿ (73ನೇ ನಿ.) ಗೋಲು ಹೊಡೆದರು.
ಇನ್ನೊಂದು ಪಂದ್ಯದಲ್ಲಿ ವಿಜಯನಗರ ಎಫ್‌ಸಿ ತಂಡ 2–0 ಗೋಲುಗಳಿಂದ ರೂಟ್ಸ್ ಎಫ್‌ಎಸ್ (ಕೆಎಸ್‌ಎಫ್‌ಎ) ವಿರುದ್ಧ ಗೆಲುವು ಸಾಧಿಸಿತು. ವಿಜಯನಗರ ತಂಡದ ಪರ ಸುಭಾಶ್ ರೈ (55ನೇ ನಿ.) ಮತ್ತು ಹೆಂತಿನೇಶ್ ಕಿಪ್ಜೆನ್ (90+2ನೇ ನಿ.) ಗೋಲು ಗಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.