ADVERTISEMENT

ರೆಫರಿಗಳಿಗಾಗಿ ಫಿಫಾ ಎಂಎ ಕೋರ್ಸ್ ಆಯೋಜಿಸಿದ ಎಐಎಫ್‌ಎಫ್

ಪಿಟಿಐ
Published 24 ಜುಲೈ 2020, 13:49 IST
Last Updated 24 ಜುಲೈ 2020, 13:49 IST
ಗೊಂದಲ ಏರ್ಪಟ್ಟಾಗ ಆಟಗಾರರನ್ನು ನಿಯಂತ್ರಿಸುವುದು ರೆಫರಿಗಳಿಗೆ ಸವಾಲು ಆಗಿರುತ್ತದೆ –ಪ್ರಜಾವಾಣಿ ಚಿತ್ರ
ಗೊಂದಲ ಏರ್ಪಟ್ಟಾಗ ಆಟಗಾರರನ್ನು ನಿಯಂತ್ರಿಸುವುದು ರೆಫರಿಗಳಿಗೆ ಸವಾಲು ಆಗಿರುತ್ತದೆ –ಪ್ರಜಾವಾಣಿ ಚಿತ್ರ   

ನವದೆಹಲಿ: ಫುಟ್‌ಬಾಲ್‌ನ ನಿಯಮಗಳಲ್ಲಿ ಆಗಿರುವ ಬದಲಾವಣೆಗಳ ಬಗ್ಗೆ ಆಳವಾಗಿ ತಿಳಿದುಕೊಳ್ಳುವುದಕ್ಕಾಗಿ ರೆಫರಿಗಳಿಗಾಗಿ ಅಖಿಲ ಭಾರತ ಫುಟ್‌ಬಾಲ್ ಫೆಡರೇಷನ್ (ಎಐಎಫ್ಎಫ್) ಎರಡು ದಿನಗಳ ಆನ್‌ಲೈನ್‌ ತರಬೇತಿ ಮಂಗಳವಾರ ಮತ್ತು ಬುಧವಾರ ಆಯೋಜಿಸಿತ್ತು. ಫಿಫಾದ ಎಂ.ಎ ಕೋರ್ಸ್‌ ಎಂದು ಕರೆಯಲಾಗುವ ಕಾರ್ಯಕ್ರಮದಲ್ಲಿ ಐವತ್ತು ರೆಫರಿಗಳು ಪಾಲ್ಗೊಂಡಿದ್ದರು.

ಉಜ್ಬೆಕಿಸ್ತಾನದ ಫರ್ಕದ್ ಅಬ್ದುಲ್ಲೆವ್ ಅವರು ತರಬೇತುದಾರರಾಗಿ ಕಾರ್ಯನಿರ್ವಹಿಸಿದ್ದು ಹ್ಯಾಂಡ್‌ಬಾಲ್ ಮತ್ತು ಪೆನಾಲ್ಟಿ ಪ್ರದೇಶಗಳಲ್ಲಿ ಆಗುವ ಲೋಪಗಳಿಗೆ ಸಂಬಂಧಿಸಿದ ಗೊಂದಲಗಳಿಗೆ ಪರಿಹಾರ ಕಂಡುಕೊಳ್ಳುವುದಕ್ಕೆ ತರಬೇತಿಯಲ್ಲಿ ಒತ್ತು ನೀಡಲಾಗಿತ್ತು.

‘2020–21ರಲ್ಲಿ ಜಾರಿಗೆ ಬಂದಿರುವ ಹೊಸ ನಿಯಮಗಳ ಬಗ್ಗೆ ತಿಳಿದುಕೊಳ್ಳಲು ಮತ್ತು ಸಂದೇಹಗಳಿಗೆ ಪರಿಹಾರ ಕಂಡುಕೊಳ್ಳಲು ಈ ಕಾರ್ಯಕ್ರಮ ಅತ್ಯುತ್ತಮ ವೇದಿಕೆಯಾಗಿತ್ತು. ಆಕಸ್ಮಿಕವಾಗಿ ಆಗುವ ಹ್ಯಾಂಡ್‌ಬಾಲ್‌ ಮತ್ತು ಆಫ್‌ಸೈಡ್‌ಗೆ ಸಂಬಂಧಿಸಿದ ಗೊಂದಲಗ ಬಗ್ಗೆ ಇಲ್ಲಿ ಚರ್ಚೆ ನಡೆದಿದ್ದು ರೆಫರಿಗಳು ತಮ್ಮ ಜ್ಞಾನವನ್ನು ವಿಸ್ತಾರ ಮಾಡಿಕೊಂಡಿದ್ದಾರೆ’ ಎಂದು ಅಬ್ದುಲ್ಲೆವ್ ಹೇಳಿದರು.

ADVERTISEMENT

2018ರ ಫಿಫಾ ವಿಶ್ವಕಪ್ ಸೇರಿದಂತೆ ನಾಲ್ಕು ವಿಶ್ವಕಪ್, ಎರಡು ಎಎಫ್‌ಸಿ ಏಷ್ಯಾಕಪ್‌ ಮತ್ತಿತರ ಟೂರ್ನಿಗಳಲ್ಲಿ ಅಬ್ದುಲ್ಲೆವ್ ತಾಂತ್ರಿಕ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದಾರೆ.

’ಸ್ಥಳೀಯ ತರಬೇತುದಾರರು ಮತ್ತು ವಿಶ್ಲೇಷಕರು ರೆಫರಿಗಳ ನೈಪುಣ್ಯ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಅವರನ್ನು ಎಎಫ್‌ಸಿ, ಫಿಫಾ ಮುಂತಾದ ಸಂಸ್ಥೆಗಳು ಆಯೋಜಿಸುವ ಟೂರ್ನಿಗಳ ಮಟ್ಟಕ್ಕೆ ಬೆಳೆಸುವ ಕಾರ್ಯ ಸ್ಥಳೀಯ ಮಟ್ಟದಲ್ಲಿ ಆಗಬೇಕು ಎಂಬದು ತರಬೇತಿ ಕಾರ್ಯಕ್ರಮದಲ್ಲಿ ಮನವರಿಕೆಯಾಯಿತು‘ ಎಂದು ಅಬ್ದುಲ್ಲೆವ್ ಅಭಿಪ್ರಾಯಪಟ್ಟರು.

‘ಈ ಸಾಲಿನಿಂದ ಜಾರಿಗೆ ಬಂದಿರುವ ಹೊಸ ನಿಮಯಗಳ ಬಗ್ಗೆ ಫರ್ಕದ್ ಅವರು ವಿಡಿಯೊ ಮೂಲಕ ಸವಿಸ್ತಾರವಾಗಿ ವಿವರಿಸಿದ್ದಾರೆ. ನಿಯಮಗಳನ್ನು ಬದಲಿಸಿದ್ದು ಯಾಕೆ ಎಂದು ಈ ತರಬೇತಿಯಲ್ಲಿ ಪಾಲ್ಗೊಂಡ ನಂತರ ಮನವರಿಕೆಯಾಯಿತು’ ಎಂದು ಎಐಎಫ್ಎಫ್ ಕೊಡಮಾಡುವ ವಾರ್ಷದ ರೆಫರಿ ಪ್ರಶಸ್ತಿ ಗಳಿಸಿದ ಆರ್‌.ವೆಂಕಟೇಶ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.