ADVERTISEMENT

ಬಿಡಿಎಫ್‌ಎ ಎ ಡಿವಿಷನ್‌ ಲೀಗ್‌ ಚಾಂಪಿಯನ್‌ಷಿಪ್‌: ಬೆಂಗಳೂರು ಸಿಟಿ ಎಫ್‌ಸಿಗೆ ಜಯ

ಬಿಡಿಎಫ್‌ಎ ಎ ಡಿವಿಷನ್‌ ಲೀಗ್‌ ಚಾಂಪಿಯನ್‌ಷಿಪ್‌

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2025, 16:28 IST
Last Updated 8 ಏಪ್ರಿಲ್ 2025, 16:28 IST
   

ಬೆಂಗಳೂರು: ಬೆಂಗಳೂರು ಸಿಟಿ ಎಫ್‌ಸಿ ತಂಡ 2–0 ಗೋಲುಗಳಿಂದ ಬಿಡಿಎಫ್‌ಎ ಎ ಡಿವಿಷನ್‌ ಲೀಗ್‌ ಚಾಂಪಿಯನ್‌ಷಿಪ್‌ನಲ್ಲಿ ಮಂಗಳವಾರ ವಿಜಯನಗರ ಎಫ್‌ಸಿ ವಿರುದ್ಧ ಗೆಲುವು ಸಾಧಿಸಿತು.

ಅಶೋಕ ನಗರದ ಬೆಂಗಳೂರು ಫುಟ್‌ಬಾಲ್‌ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಬೆಂಗಳೂರು ಸಿಟಿ ತಂಡದ ಕಾರ್ತಿ ಎಸ್‌ (38ನೇ ನಿ.) ಮತ್ತು ಅನುರಾಗ್‌ ದಿವಾಳಿ (45ನೇ ನಿ.) ಗೋಲು ಹೊಡೆದರು.

ಇನ್ನೊಂದು ಪಂದ್ಯದಲ್ಲಿ ಯಂಗ್‌ ಚಾಲೆಂಜರ್ಸ್‌ ಎಫ್‌ಸಿ 2–1 ಗೋಲುಗಳಿಂದ ಜಹವಾರ್‌ ಯೂನಿಯನ್‌ ಎಫ್‌ಸಿ ವಿರುದ್ಧ ಜಯಿಸಿತು.ಯಂಗ್‌ ಚಾಲೆಂಜರ್ಸ್ ತಂಡದ ರಾಜು ಜಿ.(40+2ನೇ ನಿ., 66ನೇ ನಿ.) ಗೋಲು ಹೊಡೆದರು. ಜಹವಾರ್‌ ತಂಡದ ಅನಿಶ್‌ ಬಾಮ್‌ಬಾನಿ (53ನೇ ನಿ.) ಗೋಲು ಗಳಿಸಿದರು.  

ADVERTISEMENT

ಸಿ ಡಿವಿಷನ್‌ ಲೀಗ್‌ ಚಾಂಪಿಯನ್‌ಷಿಪ್‌ನಲ್ಲಿ ಯಲಹಂಕ ತಂಡ 1–0 ಗೋಲಿನಿಂದ ಆರ್‌.ಟಿ. ನಗರ ಎಫ್‌ಸಿ ತಂಡವನ್ನು ಮಣಿಸಿತು. ಅಭಿನವ್‌ ಕುಮಾರ್‌ (28ನೇ ನಿ.) ಉಡುಗೊರೆ ಗೋಲು ಹೊಡೆದರು. ಎರಡನೇ ಪಂದ್ಯದಲ್ಲಿ ವಿಕ್ಟೋರಿಯಾ ಎಫ್‌ಸಿ ತಂಡ 1–0 ಗೋಲಿನಿಂದ ಜೊಗೊ ಬೊನಿಟೊ ಸ್ಕೋರರ್‌ ವಿರುದ್ಧ ಜಯ ಸಾಧಿಸಿತು. ಮೂರನೇ ಪಂದ್ಯದಲ್ಲಿ ಪ್ಲೇ 365 ತಂಡ 7–1 ಗೋಲುಗಳಿಂದ ಕರ್ನಾಟಕ ಯುನೈಟೆಡ್‌ ಎಫ್‌ಸಿ ವಿರುದ್ಧ ಜಯಿಸಿತು. ನಾಲ್ಕನೆ ಪಂದ್ಯದಲ್ಲಿ ಆಲ್ಕೆಮಿ ಐಎಫ್‌ಎ ತಂಡ 6–0 ಗೋಲಿನಿಂದ ಸಂಪತ್‌ ಸ್ಪೋರ್ಟ್ಸ್‌ ಅಕಾಡೆಮಿ ವಿರುದ್ಧ ಭರ್ಜರಿ ಗೆಲುವು ಪಡೆಯಿತು.

ಡಿ ಗುಂಪಿನ ಪಂದ್ಯದಲ್ಲಿ ಬೆಂಗಳೂರು ಬ್ಲೂಸ್‌ ಎಫ್‌ಸಿ ತಂಡ 2–1 ಗೋಲುಗಳಿಂದ ವಿನಾಯಕ ಎಫ್‌ಸಿ ತಂಡವನ್ನು ಸೋಲಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.