ADVERTISEMENT

Football | ಬೆಂಗಳೂರು ಡ್ರೀಮ್‌ ತಂಡಕ್ಕೆ ಭರ್ಜರಿ ಜಯ

ಬಿಡಿಎಫ್‌ಎ ಎ ಡಿವಿಷನ್‌ ಲೀಗ್‌ ಪಂದ್ಯ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2025, 13:18 IST
Last Updated 23 ಏಪ್ರಿಲ್ 2025, 13:18 IST
<div class="paragraphs"><p>ಫುಟ್‌ಬಾಲ್</p></div>

ಫುಟ್‌ಬಾಲ್

   

ಬೆಂಗಳೂರು: ಬೆಂಗಳೂರು ಡ್ರೀಮ್‌ ಯುನೈಟೆಡ್‌ ಎಫ್‌ಸಿ ಬಿಡಿಎಫ್‌ಎ ಎ ಡಿವಿಷನ್‌ ಲೀಗ್‌ ಪಂದ್ಯದಲ್ಲಿ ಬುಧವಾರ ಬೆಂಗಳೂರು ಸಿಟಿ ಎಫ್‌ಸಿ ವಿರುದ್ಧ 4–0 ಗೋಲುಗಳಿಂದ ಗೆಲುವು ಸಾಧಿಸಿತು. 

ಅಶೋಕನಗರದ ಬೆಂಗಳೂರು ಫುಟ್‌ಬಾಲ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಬೆಂಗಳೂರು ಡ್ರೀಮ್‌ ತಂಡದ ಪರ ಜೈ ಹರಿಬರ್ಮನ್‌ (11ನೇ ನಿ., 52ನೇ ನಿ., 70ನೇ ನಿ.) ಮತ್ತು ಕೆ. ಲಾಲ್‌ರಿನ್‌ಫೆಲಾ (20ನೇ ನಿ.) ಗೋಲು ಗಳಿಸಿದರು.  

ADVERTISEMENT

ಡಿವೈಇಎಸ್‌ ಎಫ್‌ಸಿ ತಂಡ 10–0 ಗೋಲುಗಳಿಂದ ಯಂಗ್‌ ಚಾಲೆಂಜರ್ಸ್‌ ಎಫ್‌ಸಿ ವಿರುದ್ಧ ಭರ್ಜರಿ ಜಯಗಳಿಸಿತು. ಡಿವೈಇಎಸ್‌ ಪರ ಭರತ್‌ ಗೌಡ (15ನೇ, 25ನೇ, 54ನೇ, 84ನೇ ನಿ.), ಹಿಮಾದೀಪ್‌ (29ನೇ ನಿ.), ಮಧನ್‌ (19ನೇ, 65ನೇ ನಿ.), ವಿಕಾಸ್‌ ಡಿ.ಕೆ. (52ನೇ ನಿ.), ಸಚಿನ್‌ (72ನೇ ನಿ.) ಮತ್ತು ಸಿರಿಲ್‌ ಜಾನ್ಸ್‌ (75ನೇ ನಿ.) ಗೋಲು ಗಳಿಸಿದರು. 

ಸಿ ಡಿವಿಷನ್‌ ಡಿ ಗುಂಪಿನ ಪಂದ್ಯದಲ್ಲಿ ವಿನಾಯಕ ಎಫ್‌ಸಿ ತಂಡ 2–1 ಗೋಲುಗಳಿಂದ ಸ್ಪೋರ್ಟಿಂಗ್ ಯೂತ್ಸ್‌ ಎಫ್‌ಸಿ ವಿರುದ್ಧ ಜಯಿಸಿತು. ಇನ್ನೊಂದು ಪಂದ್ಯದಲ್ಲಿ ಈಸ್ಟ್‌ ವೆಸ್ಟ್‌ ಎಫ್‌ಸಿ 10–0 ಗೋಲುಗಳಿಂದ ಎದುರಾಳಿ ಜೆಪಿ ಸ್ಪೋರ್ಟ್ಸ್‌ ಎಫ್‌ಸಿ ವಿರುದ್ಧ ಗೆಲುವು ಸಾಧಿಸಿತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.