ADVERTISEMENT

Football | ಡ್ರೀಮ್‌ ಯುನೈಟೆಡ್‌ ಎಫ್‌ಸಿಗೆ ಜಯ

ಬಿಡಿಎಫ್‌ಎ ಎ ಡಿವಿಷನ್ ಲೀಗ್‌ ಚಾಂಪಿಯನ್‌ಷಿಪ್‌

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2025, 16:22 IST
Last Updated 11 ಏಪ್ರಿಲ್ 2025, 16:22 IST
<div class="paragraphs"><p>ಫುಟ್‌ಬಾಲ್</p></div>

ಫುಟ್‌ಬಾಲ್

   

ಬೆಂಗಳೂರು: ಬೆಂಗಳೂರು ಡ್ರೀಮ್‌ ಯುನೈಟೆಡ್‌ ಎಫ್‌ಸಿ ತಂಡ ಬಿಡಿಎಫ್‌ಎ ಎ ಡಿವಿಷನ್  ಲೀಗ್‌ ಚಾಂಪಿಯನ್‌ಷಿಪ್‌ನಲ್ಲಿ ಬುಧವಾರ ಎಗಿಒಆರ್‌ಸಿ ತಂಡದ ವಿರುದ್ಧ ಭರ್ಜರಿ ಗೆಲುವು ಸಾಧಿಸಿತು.

ಅಶೋಕ ನಗರದ ಬೆಂಗಳೂರು ಫುಟ್‌ಬಾಲ್‌ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಡ್ರೀಮ್‌ ಯುನೈಟೆಡ್‌ ತಂಡದ ಪರ ಜೈ ರಿ ಬರ್ಮನ್‌ (12,33 ಮತ್ತು 79ನೇ) ಗೋಲು ಗಳಿಸಿದರು. 

ADVERTISEMENT

ಇನ್ನೊಂದು ಪಂದ್ಯದಲ್ಲಿ ರೂಟ್ಸ್‌ ಎಫ್‌ಎಸ್‌ (ಕೆಎಸ್‌ಎಫ್‌ಎ) ತಂಡ 2–1 ಗೋಲುಗಳಿಂದ ಆರ್‌ಡಬ್ಲ್ಯುಎಫ್‌  ಎಫ್‌ಸಿ ವಿರುದ್ಧ ಜಯಿಸಿತು. ರೂಟ್ಸ್‌ ಎಫ್ಎಸ್‌ ತಂಡದ ಪರ ಬಿ.ಅಭಿರಾಮ್‌ (45ನೇ ನಿ.),  ಸಿದ್ದಾರ್ಥ್‌ ಜಯಂತ್‌ (79ನೇ ನಿ.) ಗೋಲು ಗಳಿಸಿದರು. ಆರ್‌ಡಬ್ಲ್ಯುಎಫ್‌ ತಂಡದ ಪರ  ರಾಜೇಶ್‌ ಎಸ್‌. (40+2) ಗೋಲು ಹೊಡೆದರು. 

ಸಿ ಡಿವಿಷನ್‌ ಲೀಗ್‌ ಚಾಂಪಿಯನ್‌ಷಿಪ್‌ನಲ್ಲಿಬ್ಲೂ ಬ್ಲೂ ಡೈಮಂಡ್‌ ತಂಡ 5–1 ಗೋಲುಗಳಿಂದ ರಶ್‌ ತಂಡವನ್ನು ಮಣಸಿತು.ಎರಡನೇ ಪಂದ್ಯದಲ್ಲಿ ಆರ್‌ ವಿ ಎಫ್‌ಸಿ ತಂಡ 6–1 ಗೋಲುಗಳಿಂದ ಶುಬೋದಯ ಎಫ್‌ಬಿ ತಂಡದ ವಿರುದ್ಧ ಜಯಿಸಿತು. ಮೂರನೇ ಪಂದ್ಯದಲ್ಲಿ ಯಂಗ್‌ ಬ್ಲೂಸ್‌ ಎಲೀಟ್‌ ಎಫ್‌ಸಿ ತಂಡ 1–1 ಗೋಲಿನಿಂದ  ಫುಟ್‌ಬಾಲ್‌ ಔರಾ ವಿರುದ್ಧ ಡ್ರಾ ಸಾಧಿಸಿತು. 

ಎಂಆರ್‌ಯು ಎಫ್‌ಸಿ ತಂಡ 2–0 ಗೋಲುಗಳಿಂದ ಬೆಂಗಳೂರು ಚ್ಯಾಂಪ್ಸ್‌ ಎಫ್‌ಎ ವಿರುದ್ಧ ಗೆಲುವು ಸಾಧಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.