ಫುಟ್‌ಬಾಲ್
ಬೆಂಗಳೂರು: ಬಿಟಿಎಂ ಫುಟ್‌ಬಾಲ್ ಕ್ಲಬ್ ತಂಡವು ಬುಧವಾರ ನಡೆದ ಬಿಡಿಎಫ್ಎ ‘ಎ’ ಡಿವಿಷನ್ ಲೀಗ್ ಪಂದ್ಯದಲ್ಲಿ 8–0 ಗೋಲುಗಳಿಂದ ಎಫ್‌ಸಿ ಡೆಕ್ಕನ್ ತಂಡವನ್ನು ಮಣಿಸಿತು.
ಅಶೋಕನಗರದ ಬೆಂಗಳೂರು ಫುಟ್‌ಬಾಲ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಬಿಟಿಎಂ ಪರ ನಕ್ಷತ್ರ ಜೈನ್ (42ನೇ, 56ನೇ, 58ನೇ ಮತ್ತು 60ನೇ), ಯೋಗಿತ್ ಎಂ. (50ನೇ, 62ನೇ ಮತ್ತು 80ನೇ) ಮತ್ತು ಪಿ. ಶಾಂಗ್ (79ನೇ) ಗೋಲು ಹೊಡೆದರು.
ಆದಾಯ ತೆರಿಗೆ ಎಫ್‌ಸಿ ತಂಡ 5–4 ಗೋಲುಗಳಿಂದ ಶ್ರೀ ಗಜಾನನ ಎಫ್‌ಸಿ ವಿರುದ್ಧ ಜಯಿಸಿತು. ಆದಾಯ ತೆರಿಗೆ ಎಫ್‌ಸಿ ತಂಡದ ಪರ ಲತೇಶ್ ಎಸ್ (16ನೇ ನಿ.), ಅಕ್ಷಯ್ ಕೆಎಸ್. (23ನೇ ನಿ.), ನರೇಂದ್ರ ಕುಮಾರ್ (51ನೇ, 57ನೇ ನಿ.), ಪಾಂಡ್ಯನ್ ಎಂ. (74ನೇ ನಿ.) ಗೋಲು ಹೊಡೆದರು.
ಗಜಾನನ ತಂಡದ ಪರ ಹ್ಯಾರಿಸ್ ಡಾರೆಲ್ ಸಿ. (9ನೇ ನಿ.), ಅರುಣ್‌ಕುಮಾರ್ ಪೆರಿಯಾಸ್ವಾಮಿ (29ನೇ ನಿ.) ಮತ್ತು ಜಾನ್ಸ್ ಮುತ್ತುರಾಜ್ (34ನೇ ನಿ.ಮತ್ತು 48ನೇ ನಿ.) ಗೋಲು ಬಾರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.