ADVERTISEMENT

ಡ್ರೆಸಿಂಗ್ ರೂಮ್‌ನಲ್ಲಿ ಸ್ಮಶಾನಮೌನ ನೆಲಸಿತ್ತು...: ಭಾರತ ಫುಟ್‌ಬಾಲ್ ತಂಡದ ಕೋಚ್

ಪಿಟಿಐ
Published 11 ಜೂನ್ 2025, 16:24 IST
Last Updated 11 ಜೂನ್ 2025, 16:24 IST
<div class="paragraphs"><p>ಫುಟ್‌ಬಾಲ್</p></div>

ಫುಟ್‌ಬಾಲ್

   

ಹಾಂಗ್‌ಕಾಂಗ್‌: ಹಾಂಗ್‌ಕಾಂಗ್ ಎದುರು ಕೊನೆಗಳಿಗೆಯ ‘ಪೆನಾಲ್ಟಿ’ಯಿಂದ ಆಘಾತಕಾರಿ ಸೋಲನುಭವಿಸಿದ ನಂತರ ಭಾರತದ ಡ್ರೆಸಿಂಗ್‌ ರೂಮ್‌ನಲ್ಲಿ ಸ್ಮಶಾನಮೌನ ನೆಲಸಿತ್ತು ಎಂದು ತಂಡದ ಹೆಡ್‌ ಕೋಚ್‌ ಮನೊಲೊ ಮಾರ್ಕ್ವೆಝ್ ಹೇಳಿದ್ದಾರೆ.

ಆದರೆ, ಈ ಹಿನ್ನಡೆ ಹೊರತಾಗಿಯೂ ತಂಡ 2027ರ ಎಎಫ್‌ಸಿ ಏಷ್ಯನ್‌ ಕಪ್‌ಗೆ ಅರ್ಹತೆ ಪಡೆಯುವ ಆಶಾವಾದ ಹೊಂದಿದ್ದಾರೆ.

ADVERTISEMENT

ಹಾಂಗ್‌ಕಾಂಗ್ ‘ಇಂಜುರಿ ಅವಧಿ’ಯಲ್ಲಿ ಈ ಪೆನಾಲ್ಟಿಯಲ್ಲಿ ಗೋಲು ಗಳಿಸಿದ್ದು, ಭಾರತ ತಂಡದ ತೇರ್ಗಡೆ ಅವಕಾಶ ಈಗ ಕಠಿಣವಾಗಿದೆ. ‘ನಮಗೆ ಬೇಸರವಾಗಿದೆ. ಆದರೆ ನಮಗೆ ಅರ್ಹತೆ ಪಡೆಯುವ ಅವಕಾಶ ಈಗಲೂ ಇದೆ’ ಎಂದು ಅವರು ಪಂದ್ಯಾನಂತರದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಫಿಫಾ ರ್‍ಯಾಂಕಿಂಗ್‌ನಲ್ಲಿ ಭಾರತ, ಹಾಂಗ್‌ಕಾಂಗ್‌ಗಿಂತ 26 ಸ್ಥಾನಗಳಷ್ಟು ಮೇಲಿದೆ. ಆದರೆ ಪಂದ್ಯದ ಪ್ರಮುಖ ಘಟ್ಟಗಳಲ್ಲಿ ಅವಕಾಶಗಳನ್ನು ಪರಿವರ್ತಿಸುವಲ್ಲಿ ಎಡವಿತು. 35ನೇ ನಿಮಿಷ ಆಶಿಕ್ ಕುರುಣಿಯನ್ ಗೋಲು ಗಳಿಸುವ ಸುವರ್ಣಾವಕಾಶ ವ್ಯರ್ಥಪಡಿಸಿದ್ದರು.

‘ಸಿ’ ಗುಂಪಿನಲ್ಲಿರುವ ಭಾರತ ಎರಡು ಪಂದ್ಯಗಳಿಂದ ಕೇವಲ ಒಂದು ಪಾಯಿಂಟ್ ಪಡೆದಿದೆ. ಗುಂಪಿನ ವಿಜೇತ ತಂಡ ಮಾತ್ರ 2027ರ ಎಎಫ್‌ಸಿ ಏಷ್ಯನ್ ಕಪ್ ಆಡುವ ಅರ್ಹತೆ ಪಡೆಯುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.