ADVERTISEMENT

ಇಂಡಿಯನ್ ಸೂಪರ್ ಲೀಗ್ಆ: ಶಿಕ್ ಕುರುನಿಯನ್ ’ಡ್ರಾ‘ ಕಾಣಿಕೆ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2021, 16:35 IST
Last Updated 28 ನವೆಂಬರ್ 2021, 16:35 IST
ಆಶಿಕ್ ಕುರುನಿಯನ್
ಆಶಿಕ್ ಕುರುನಿಯನ್   

ಬ್ಯಾಂಬೊಲಿಮ್, ಗೋವಾ: ಜಿಎಂಸಿ ಅಥ್ಲೆಟಿಕ್ ಕ್ರೀಡಾಂಗಣದಲ್ಲಿ ಭಾನುವಾರ ಆಶಿಕ್ ಕುರುನಿಯನ್ ಏಕಕಾಲಕ್ಕೆ ನಾಯಕ ಮತ್ತು ಖಳನಾಯಕ ಎರಡೂ ಆದರು!

ಇಲ್ಲಿ ನಡೆದ ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್) ಫುಟ್‌ಬಾಲ್ ಪಂದ್ಯದಲ್ಲಿ ಆಶಿಕ್ ಕುರುನಿಯನ್ ತಾವು ಪ್ರತಿನಿಧಿಸುವ ಬೆಂಗಳೂರು ಫುಟ್‌ಬಾಲ್ ಕ್ಲಬ್‌ ತಂಡಕ್ಕೆ ಒಂದು ಗೋಲಿನ ಮುನ್ನಡೆ ಕೊಡಿಸಿದ್ದರು. ಕೆಲವೇ ನಿಮಿಷಗಳ ನಂತರ ಕೇರಳ ಬ್ಲಾಸ್ಟರ್ಸ್ ತಂಡಕ್ಕೆ ಗೋಲಿನ ಕಾಣಿಕೆ ನೀಡಿ ಪಂದ್ಯವು ಡ್ರಾ ಆಗಲು ಕಾರಣವಾದರು. ಇದರಿಂದಾಗಿ ಎರಡೂ ತಂಡಗಳು ಪಾಯಿಂಟ್ಸ್‌ಗಳನ್ನು ಹಂಚಿಕೊಂಡವು.

ಸುನಿಲ್ ಚೇಟ್ರಿ ಬಳಗ ಮತ್ತು ಕೇರಳ ತಂಡಗಳ ನಡುವಣ ಈ ಪಂದ್ಯವು ಆರಂಭದಿಂದಲೂ ಜಿದ್ದಾಜಿದ್ದಿಯಿಂದ ಕೂಡಿತ್ತು. 84ನೇ ನಿಮಿಷದವರೆಗೂ ಉಭಯ ತಂಡಗಳಿಗೆ ಗೋಲು ಗಳಿಸಲು ಸಾಧ್ಯವಾಗಿರಲಿಲ್ಲ. ಎರಡೂ ಕಡೆಯ ರಕ್ಷಣಾ ಆಟಗಾರರು ತಮ್ಮ ಸಂಪೂರ್ಣ ಸಾಮರ್ಥ್ಯ ತೋರಿ, ಗೋಲುಗಳನ್ನು ತಡೆದಿದ್ದರು.

ADVERTISEMENT

ಅದರಲ್ಲೂ ಬೆಂಗಳೂರು ತಂಡದ ಗೋಲ್‌ಕೀಪರ್ ಗುರುಪ್ರೀತ್ ಸಿಂಗ್ ಸಂಧು ಬಂಡೆಗಲ್ಲಿನಂತೆ ನಿಂತು ಕೇರಳದ ದಾಳಿಯನ್ನು ತಡೆದರು.

ಅದೇ ರೀತಿ, ಕೇರಳದ ಗೋಲ್‌ಕೀಪರ್ ಅಲ್ಬಿನೊ ಗೋಮ್ಸ್‌ ಕೂಡ ಬೆಂಗಳೂರು ದಾಳಿಯನ್ನು ತಡೆಯುವಲ್ಲಿ ಯಶಸ್ವಿಯಾಗಿದ್ದರು. 84ನೇ ನಿಮಿಷದಲ್ಲಿ ಆಶಿಕ್ ಕಾಲ್ಚಳಕಕ್ಕೆ ಗೋಲು ಒಲಿಯಿತು. ಕೇರಳದ ಗೋಲ್‌ಕೀಪರ್ ಮತ್ತು ರಕ್ಷಣಾ ಆಟಗಾರರನ್ನು ವಂಚಿಸುವಲ್ಲಿ ಅವರು ಯಶಸ್ವಿಯಾಗಿದ್ದರು.

ಆದರೆ, ನಾಲ್ಕು ನಿಮಿಷಗಳ ನಂತರ ಆಶಿಕ್ ಅವರಿಂದ ಪ್ರಮಾದ ನಡೆದುಹೋಯಿತು. ಸೆಲ್ಫ್ ಗೋಲ್ ಹೊಡೆದ ಅವರು ಕೇರಳದ ಸೋಲು ತಪ್ಪಿಸಿದರು.

ಬೆಂಗಳೂರು ತಂಡವು ಮೂರು ಪಂದ್ಯಗಳನ್ನು ಆಡಿದ್ದು ನಾಲ್ಕು ಅಂಕ ಗಳಿಸಿದೆ. ಕೇರಳ ತಂಡವು ಎರಡು ಅಂಕ ಗಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.