ADVERTISEMENT

ಎಫ್‌ಸಿ ಬೆಂಗಳೂರು ಯುನೈಟೆಡ್‌ ತಂಡದ ಮುಖ್ಯ ಕೋಚ್ ಆಗಿ ಮೋಹನ್‌ರಾಜ್ ಮರುನೇಮಕ

ಪಿಟಿಐ
Published 2 ಜುಲೈ 2025, 19:53 IST
Last Updated 2 ಜುಲೈ 2025, 19:53 IST
ಮೋಹನ್‌ರಾಜ್
ಮೋಹನ್‌ರಾಜ್   

ಬೆಂಗಳೂರು: ಭಾರತ ಫುಟ್ಬಾಲ್‌ ತಂಡದ ಮಾಜಿ ಆಟಗಾರ ನಲ್ಲಪ್ಪನ್‌ ಮೋಹನ್‌ರಾಜ್ ಅವರು ಎಫ್‌ಸಿ ಬೆಂಗಳೂರು ಯುನೈಟೆಡ್‌ ತಂಡದ ಮುಖ್ಯ ಕೋಚ್‌ ಆಗಿ ಮರುನೇಮಕಗೊಂಡಿದ್ದಾರೆ.

‘ಐ–ಲೀಗ್‌ 2ರ 2025–26ನೇ ಆವೃತ್ತಿಯಲ್ಲಿಯೂ ಮೋಹನ್‌ರಾಜ್ ಅವರೇ ಮುಖ್ಯ ಕೋಚ್‌ ಆಗಿ ಮುಂದುವರಿಯಲಿದ್ದಾರೆ’ ಎಂದು ನಿಮಿದಾ ಸ್ಪೋರ್ಟ್ಸ್‌ ಸಂಸ್ಥಾಪಕ ಗೌರವ್‌ ಎಂ. ತಿಳಿಸಿದ್ದಾರೆ. ಈ ಸಂಸ್ಥೆಯು, ಎಫ್‌ಸಿ ಬೆಂಗಳೂರು ಯುನೈಟೆಡ್‌ ತಂಡದ ಮಾಲೀಕತ್ವ ಹೊಂದಿದೆ.

ಕಳೆದ ಆವೃತ್ತಿಯಲ್ಲಿ ಎಫ್‌ಸಿ ಬೆಂಗಳೂರು ಯುನೈಟೆಡ್‌ ತಂಡವು ನಾಲ್ಕನೇ ಸ್ಥಾನ ಪಡೆದಿತ್ತು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.