ADVERTISEMENT

ಫುಟ್‌ಬಾಲ್: ಎಂಆರ್‌ಯು ತಂಡಕ್ಕೆ ಜಯ

​ಪ್ರಜಾವಾಣಿ ವಾರ್ತೆ
Published 28 ಮೇ 2025, 19:52 IST
Last Updated 28 ಮೇ 2025, 19:52 IST
ಫುಟ್‌ಬಾಲ್
ಫುಟ್‌ಬಾಲ್   

ಬೆಂಗಳೂರು: ಎಂ.ಆರ್‌.ಯು ಫುಟ್‌ಬಾಲ್ ಕ್ಲಬ್ ತಂಡವು ಇಲ್ಲಿ ನಡೆಯುತ್ತಿರುವ ಕರ್ನಾಟಕ ರಾಜ್ಯ ಫುಟ್‌ಬಾಲ್ ಸಂಸ್ಥೆ ಆಶ್ರಯದ 21 ವರ್ಷದೊಳಗಿನವರ ಫುಟ್‌ಬಾಲ್ ಟೂರ್ನಿಯ ಎ ಗುಂಪಿನ ಪಂದ್ಯದಲ್ಲಿ ಜಯಿಸಿತು. 

ಬೆಂಗಳೂರು ಫುಟ್‌ಬಾಲ್ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಎಂ.ಆರ್.ಯು ತಂಡವು 5–0ಯಿಂದ ಬ್ಲ್ಯೂಸ್ಟಾರ್ಸ್‌ ಎಫ್‌ಸಿ ವಿರುದ್ಧ ಜಯಿಸಿತು. ವಿಜೇತ ತಂಡದ ಎಸ್. ಸಚಿನ್ (2ನೇ ನಿಮಿಷ), ಆರ್. ಸಚಿನ್ (30ನಿ, 90ನಿ) ಮತ್ತು ರಾಹುಲ್ ಕೆನಡಿ (53ನಿ, 66ನಿ) ಗೋಲು ಗಳಿಸಿದರು. 

ಬಿ ಗುಂಪಿನಲ್ಲಿ ಆಲ್ಕೇಮಿ ಐಎಫ್‌ಎ 12–0ಯಿಂದ ವಿಲಿಯಂ ಎಸ್‌.ಎ ವಿರುದ್ಧ ಜಯಿಸಿತು. ಅಲ್ಕೇಮಿಯ ಸಂಪ್ರಂಶೈ ರಾಣಿ (3ನಿ, 22ನಿ), ಸನಾಬಂ ದೇವಸನ್ (17ನಿ, 25ನಿ), ಜೋಮನ್ ಜೇಕಬ್  (27ನಿ.59ನಿ.65ನಿ.68ನಿ, 75ನಿ.81ನಿ.90+2ನಿ) ಮತ್ತು ಜಿ. ಉದಿತ್ (55ನಿ) ಗೋಲು ಹೊಡೆದರು.

ADVERTISEMENT

ಇನ್ನೊಂದು ಪಂದ್ಯದಲ್ಲಿ ಬಿಪಿಎಸ್‌ಎಸ್‌ ಮತ್ತು ಸ್ಪಾಟ್ ಹುಡ್ ಎಫ್‌ಸಿ ತಂಡಗಳ ನಡುವಣ ಪಂದ್ಯವು 1–1ರಿಂದ ಡ್ರಾ ಆಯಿತು. ಬಿಪಿಎಸ್‌ಎಸ್‌ ತಂಡದ ಅಲ್ಬರ್ಟ್ ಮ್ಯಾಂಗ್‌ಲಂಗ್ ಥಾಂತ್ (64ನಿ) ಮತ್ತು ಹುಡ್ ತಂಡದ ಮೊಹಮ್ಮದ್  ಫಹಾದ್ (78ನಿ) ಗೋಲು ಗಳಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.