ADVERTISEMENT

ಐಡಬ್ಲ್ಯುಎಲ್‌: ಗೋಕುಲಂ ಕೇರಳಕ್ಕೆ ಪ್ರಶಸ್ತಿ

ಪಿಟಿಐ
Published 27 ಮೇ 2022, 12:45 IST
Last Updated 27 ಮೇ 2022, 12:45 IST
ಪ್ರಶಸ್ತಿ ಗೆದ್ದ ಗೋಕುಲಂ ಕೇರಳ ಎಫ್‌ಸಿ ಆಟಗಾರ್ತಿಯರ ಸಂಭ್ರಮ– ಟ್ವಿಟರ್‌ ಚಿತ್ರ
ಪ್ರಶಸ್ತಿ ಗೆದ್ದ ಗೋಕುಲಂ ಕೇರಳ ಎಫ್‌ಸಿ ಆಟಗಾರ್ತಿಯರ ಸಂಭ್ರಮ– ಟ್ವಿಟರ್‌ ಚಿತ್ರ   

ಭುವನೇಶ್ವರ: ಗೋಕುಲಂ ಕೇರಳ ಫುಟ್‌ಬಾಲ್‌ ಕ್ಲಬ್‌ ಸತತ ಎರಡನೇ ಬಾರಿ ಇಂಡಿಯನ್ ವಿಮೆನ್ಸ್ ಲೀಗ್ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸಿದೆ. ಬುಧವಾರ ನಡೆದ ಪಂದ್ಯದಲ್ಲಿ ತಂಡವು 3–1ರಿಂದ ಸೇತು ಎಫ್‌ಸಿಗೆ ಸೋಲುಣಿಸಿತು.

ಟೂರ್ನಿಯಲ್ಲಿ ಉಭಯ ತಂಡಗಳು ಸತತ 10 ಪಂದ್ಯಗಳಲ್ಲಿ ಜಯ ಸಾಧಿಸಿದ್ದವು. ಪ್ರಶಸ್ತಿ ಜಯಿಸಲು ಒಂದು ಪಂದ್ಯ ಮಾತ್ರ ಗೆಲ್ಲಬೇಕಿತ್ತು.

ಕಳಿಂಗ ಕ್ರೀಡಾಂಗಣದಲ್ಲಿ ನಡೆದ ಜಿದ್ದಾಜಿದ್ದಿನ ಹಣಾಹಣಿಯಲ್ಲಿ ತಮಿಳುನಾಡಿನ ಸೇತು ಎಫ್‌ಸಿಗೆ ಮೂರನೇ ನಿಮಿಷದಲ್ಲೇ ಮುನ್ನಡೆ ಲಭಿಸಿತು. ರೇಣುರಾಣಿ ತಂಡಕ್ಕೆ ಗೋಲು ಗಳಿಸಿಕೊಟ್ಟರು. 14ನೇ ನಿಮಿಷದಲ್ಲಿ ಲೈತೊಂಗ್ಮಬ್ ಆಶಾಲತಾ ದೇವಿ ಗಳಿಸಿದ ಗೋಲಿನಿಂದ ಗೋಕುಲಂ ಸಮಬಲ ಸಾಧಿಸಿತು.

ADVERTISEMENT

33ನೇ ನಿಮಿಷದಲ್ಲಿ ಎಲ್‌ಶಾದ್ದಾಯಿ ಅಚೆಂಪಾಂಗ್‌ ಮತ್ತು 40ನೇ ನಿಮಿಷದಲ್ಲಿ ಮನೀಷಾ ಕಲ್ಯಾಣ್ ಕಾಲ್ಚಳಕ ತೋರಿ ಗೋಕುಲಂ ಕೇರಳ ತಂಡದ ಗೆಲುವಿಗೆ ಕಾರಣರಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.