ADVERTISEMENT

ಎಎಫ್‌ಸಿ ವರ್ಷದ ಆಟಗಾರ್ತಿ ಪ್ರಶಸ್ತಿಗೆ ಆಶಾಲತಾ ದೇವಿ ನಾಮನಿರ್ದೇಶನ

ಪಿಟಿಐ
Published 15 ನವೆಂಬರ್ 2019, 19:45 IST
Last Updated 15 ನವೆಂಬರ್ 2019, 19:45 IST
ಆಶಾಲತಾ ದೇವಿ (ಬಲ)–ಟ್ವಿಟರ್‌ ಚಿತ್ರ
ಆಶಾಲತಾ ದೇವಿ (ಬಲ)–ಟ್ವಿಟರ್‌ ಚಿತ್ರ   

ಕೌಲಾಲಂಪುರ: ಭಾರತ ಮಹಿಳಾ ಫುಟ್‌ಬಾಲ್‌ ತಂಡದ ನಾಯಕಿ ಲೊಯಿತಾಂಗ್‌ಬಮ್‌ ಆಶಾಲತಾ ದೇವಿ ಅವರನ್ನು ಎಎಫ್‌ಸಿ ವರ್ಷದ ಆಟಗಾರ್ತಿ ಪ್ರಶಸ್ತಿಗೆ ನಾಮನಿರ್ದೇಶನ ಮಾಡಲಾಗಿದೆ.

ಇಂಫಾಲ್‌ನ 26 ವರ್ಷದ ಆಶಾಲತಾ,ಈ ವರ್ಷ ಭಾರತ ತಂಡವನ್ನು ಒಲಿಂಪಿಕ್‌ ಕ್ವಾಲಿಫೈಯರ್ಸ್ ಎರಡನೇ ಸುತ್ತು ಪ್ರವೇಶಿಸುವಂತೆ ಮಾಡಿದ್ದರು. ಅಲ್ಲದೆ ತಂಡ, 2019ರ ಸ್ಯಾಫ್‌ ಚಾಂಪಿಯನ್‌ಷಿಪ್‌ ಕಿರೀಟ ಧರಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು.

ಚೀನಾ ಆಟಗಾರ್ತಿ ಲಿ ಯಿಂಗ್‌ ಹಾಗೂ ಜಪಾನ್‌ ತಂಡದ ನಾಯಕಿ ಸಾಕಿ ಕುಮಗಾಯ್‌ ಕೂಡ ಎಎಫ್‌ಸಿ ಆಟಗಾರ್ತಿ ನಾಮನಿರ್ದೇಶನ ಆದವರಪಟ್ಟಿಯಲ್ಲಿದ್ದಾರೆ. ಡಿಸೆಂಬರ್‌ 2ರಂದು ಹಾಂಗ್‌ಕಾಂಗ್‌ನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.