ADVERTISEMENT

ಐಎಸ್‌ಎಲ್‌ ಪಂದ್ಯ ಡ್ರಾ

ಇಂಡಿಯನ್‌ ಸೂಪರ್‌ ಲೀಗ್‌: ಹೆಚ್ಚುವರಿ ಅವಧಿಯಲ್ಲಿ ಗೋವಾ ಗೋಲು

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2019, 19:39 IST
Last Updated 1 ನವೆಂಬರ್ 2019, 19:39 IST
ಚೆಂಡಿಗಾಗಿ ಪೈಪೋಟಿ ನಡೆಸಿದ ನಾರ್ತ್‌ ಈಸ್ಟ್ ಯುನೈಟೆಡ್‌ ಎಫ್‌ಸಿ ತಂಡದ ರಾಕೇಶ್‌ ಪ್ರಧಾನ್‌ ಹಾಗೂ ಎಫ್‌ಸಿ ಗೋವಾ ತಂಡದ ಜಾಕಿಚಂದ್‌ ಸಿಂಗ್‌.
ಚೆಂಡಿಗಾಗಿ ಪೈಪೋಟಿ ನಡೆಸಿದ ನಾರ್ತ್‌ ಈಸ್ಟ್ ಯುನೈಟೆಡ್‌ ಎಫ್‌ಸಿ ತಂಡದ ರಾಕೇಶ್‌ ಪ್ರಧಾನ್‌ ಹಾಗೂ ಎಫ್‌ಸಿ ಗೋವಾ ತಂಡದ ಜಾಕಿಚಂದ್‌ ಸಿಂಗ್‌.   

ಗುವಾಹಟಿ: ಐಎಸ್‌ಎಲ್ ಫುಟ್‌ಬಾಲ್‌ ಪಂದ್ಯದಲ್ಲಿ ನಾರ್ತ್‌ ಈಸ್ಟ್‌ ಯುನೈಟೆಡ್‌ ಎಫ್‌ಸಿ ಹಾಗೂ ಎಫ್‌ಸಿ ಗೋವಾ ತಂಡಗಳು 2–2ರ ಡ್ರಾ ಸಾಧಿಸಿದವು.

ಇಲ್ಲಿಯ ಇಂದಿರಾಗಾಂಧಿ ಅಥ್ಲೆಟಿಕ್‌ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಗೋವಾ ತಂಡದ ಹ್ಯುಗೊ ಬೊಮೌಸ್‌ 31ನೇ ನಿಮಿಷದಲ್ಲಿ ಗೋಲು ದಾಖಲಿಸಿದ್ದರು. 54ನೇ ನಿಮಿಷದಲ್ಲಿ ನಾರ್ತ್‌ ಈಸ್ಟ್‌ ಯುನೈಟೆಡ್‌ ಎಫ್‌ಸಿಯ ಅಸಮೋಹ್‌ ಗ್ಯಾನ್‌ ಗೋಲು ಹೊಡೆದು ಸಮಬಲ ಸಾಧಿಸಿದರು. ನಾರ್ತ್‌ ಈಸ್ಟ್‌ ಯುನೈಟೆಡ್‌ ತಂಡದ ರೆಡೀಮ್‌ ತ್ಲಾಂಗ್‌ 74ನೇ ನಿಮಿಷದಲ್ಲಿ ಯಶಸ್ಸು ಸಾಧಿಸಿದರು. 90+5ನೇ ನಿಮಿಷದಲ್ಲಿ ಗೋಲು ದಾಖಲಿಸಿದ ಗೋವಾ ತಂಡದ ಮನ್‌ವೀರ್‌ ಸಿಂಗ್‌ ಎನ್‌ಇಯು ಎಫ್‌ಸಿ ಗೆಲುವಿನ ಆಸೆ ಚಿವುಟಿ ಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT