ADVERTISEMENT

ಬೆಂಗಳೂರಿಗೆ ಕಣ್ಣನ್‌ ಪಾರ್ಥಿವ ಶರೀರ

​ಪ್ರಜಾವಾಣಿ ವಾರ್ತೆ
Published 2 ಮೇ 2019, 19:45 IST
Last Updated 2 ಮೇ 2019, 19:45 IST
ಹಿರಿಯ ಫುಟ್‌ಬಾಲ್‌ ಆಟಗಾರ ಪೂಂಗಂ ಕಣ್ಣನ್ ಅವರ ಪಾರ್ಥಿವ ಶರೀರಕ್ಕೆ ಬಂಧುಗಳು ಅಂತಿಮ ನಮನ ಸಲ್ಲಿಸಿದರು. ಪತ್ನಿ ವಿಜಯಲಕ್ಷ್ಮಿ (ನೀಲಿ ಸೀರೆ), ಸಹೋದರಿಯರಾದ ತಂಗಮಣಿ (ಹಸಿರು ಸೀರೆ) ಮತ್ತು ಕೃಷ್ಣವೇಣಿ (ಎಡತುದಿ) ಇದ್ದಾರೆ –ಪ್ರಜಾವಾಣಿ ಚಿತ್ರ
ಹಿರಿಯ ಫುಟ್‌ಬಾಲ್‌ ಆಟಗಾರ ಪೂಂಗಂ ಕಣ್ಣನ್ ಅವರ ಪಾರ್ಥಿವ ಶರೀರಕ್ಕೆ ಬಂಧುಗಳು ಅಂತಿಮ ನಮನ ಸಲ್ಲಿಸಿದರು. ಪತ್ನಿ ವಿಜಯಲಕ್ಷ್ಮಿ (ನೀಲಿ ಸೀರೆ), ಸಹೋದರಿಯರಾದ ತಂಗಮಣಿ (ಹಸಿರು ಸೀರೆ) ಮತ್ತು ಕೃಷ್ಣವೇಣಿ (ಎಡತುದಿ) ಇದ್ದಾರೆ –ಪ್ರಜಾವಾಣಿ ಚಿತ್ರ   

ಬೆಂಗಳೂರು: ಭಾರತದ ಹಿರಿಯ ಫುಟ್‌ಬಾಲ್‌ ಆಟಗಾರ ಪೂಂಗಂ ಕಣ್ಣನ್‌ ಅವರ ಪಾರ್ಥಿವ ಶರೀರವನ್ನು ಬುಧವಾರ ಮಧ್ಯರಾತ್ರಿ ವಿಮಾನದ ಮೂಲಕ ಬೆಂಗಳೂರಿಗೆ ತರಲಾಯಿತು.

80 ವರ್ಷದ ಕಣ್ಣನ್‌ ಹೋದ ಭಾನುವಾರ ಕೋಲ್ಕತ್ತದಲ್ಲಿ ನಿಧನರಾಗಿದ್ದರು. ಅವರು ಮೂರನೇ ಪತ್ನಿ ಅಂಟೋನೆಟ್‌ ಮತ್ತು ಇಬ್ಬರು ಪುತ್ರಿಯರ ಜೊತೆ ಅಲ್ಲಿನ ಡಮ್‌ ಡಮ್‌ ಪ್ರದೇಶದಲ್ಲಿ ವಾಸವಾಗಿದ್ದರು. ಅಲ್ಲಿಯೇ ಮಂಗಳವಾರ ಅಂತ್ಯಸಂಸ್ಕಾರ ನೆರವೇರಿಸಲು ನಿರ್ಧರಿಸಲಾಗಿತ್ತು.

ಬೆಂಗಳೂರಿನ ಗೌತಮಪುರದಲ್ಲಿ ವಾಸವಾಗಿರುವ ಮೊದಲ ಪತ್ನಿ ವಿಜಯಲಕ್ಷ್ಮಿ ಅವರು ಇದಕ್ಕೆ ತಗಾದೆ ತೆಗೆದಿದ್ದರು. ಬೆಂಗಳೂರಿಗೆ ಪಾರ್ಥಿವ ಶರೀರ ತರಲು ಪಟ್ಟು ಹಿಡಿದಿದ್ದರು. ತಮ್ಮ ಮದುವೆಯ ಪ್ರಮಾಣ ಪತ್ರದೊಂದಿಗೆ ಕೋಲ್ಕತ್ತಕ್ಕೆ ಹೋಗಿದ್ದರು.

ADVERTISEMENT

‘ಏಷ್ಯಾದ ಪೆಲೆ’ ಎಂದೇ ಖ್ಯಾತರಾಗಿದ್ದ ಕಣ್ಣನ್‌ ಅವರ ಪಾರ್ಥಿವ ಶರೀರವನ್ನು ಗೌತಮಪುರದ ಫುಟ್‌ಬಾಲ್‌ ಕ್ರೀಡಾಂಗಣದಲ್ಲಿ ಇಡಲಾಗಿತ್ತು. ಅವರ ಕುಟುಂಬದವರು, ಆತ್ಮೀಯರು ಮತ್ತು ಅಭಿಮಾನಿಗಳು ಬೆಳಿಗ್ಗೆಯಿಂದಲೇ ಸ್ಥಳಕ್ಕೆ ಬಂದು ಅಂತಿಮ ದರ್ಶನ ಪಡೆದರು.

ಕರ್ನಾಟಕ ರಾಜ್ಯ ಫುಟ್‌ಬಾಲ್‌ ಸಂಸ್ಥೆ (ಕೆಎಸ್‌ಎಫ್‌ಎ) ಮತ್ತು ಬೆಂಗಳೂರು ಜಿಲ್ಲಾ ಫುಟ್‌ಬಾಲ್‌ ಸಂಸ್ಥೆಯ (ಬಿಡಿಎಫ್‌ಎ) ಆಡಳಿತ ವರ್ಗದವರೂ ಕಣ್ಣನ್‌ಗೆ ಅಂತಿಮ ನಮನ ಸಲ್ಲಿಸಿದರು.

ಕಣ್ಣನ್‌ ಅವರ ಮಗ ಕೋಲ್ಕತ್ತದಿಂದ ಬೆಂಗಳೂರಿಗೆ ಬರುವುದು ತಡವಾಗಿದ್ದರಿಂದ ಶುಕ್ರವಾರ ಬೆಳಿಗ್ಗೆ ಲಕ್ಷ್ಮಿಪುರಂನಲ್ಲಿರುವ ಚಿತಾಗಾರದಲ್ಲಿ ಅಂತಿಮ ಸಂಸ್ಕಾರ ನಡೆಸಲು ತೀರ್ಮಾನಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.