ADVERTISEMENT

ಫುಟ್‌ಬಾಲ್‌: ಡ್ರೀಮ್‌ ಯುನೈಟೆಡ್‌ ಶುಭಾರಂಭ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2018, 17:18 IST
Last Updated 21 ಅಕ್ಟೋಬರ್ 2018, 17:18 IST

ಬೆಂಗಳೂರು: ವಿಷ್ಣು ಮತ್ತು ಅನಿರುದ್ಧ್‌ ಗಳಿಸಿದ ತಲಾ ಒಂದು ಗೋಲುಗಳ ನೆರವಿನಿಂದ ಬೆಂಗಳೂರು ಡ್ರೀಮ್‌ ಯುನೈಟೆಡ್‌ ತಂಡ ಬೆಂಗಳೂರು ಜಿಲ್ಲಾ ಫುಟ್‌ಬಾಲ್ ಸಂಸ್ಥೆ (ಬಿಡಿಎಫ್‌ಎ) ಆಶ್ರಯದ ಸೂಪರ್‌ ಡಿವಿಷನ್‌ ಲೀಗ್‌ನಲ್ಲಿ ಶುಭಾರಂಭ ಮಾಡಿದೆ.

ಅಶೋಕನಗರದಲ್ಲಿರುವ ಬೆಂಗಳೂರು ಫುಟ್‌ಬಾಲ್‌ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಡ್ರೀಮ್‌ ಯುನೈಟೆಡ್‌ 2–1 ಗೋಲುಗಳಿಂದ ಎಂಇಜಿ ತಂಡವನ್ನು ಸೋಲಿಸಿತು.

ವಿಜಯೀ ತಂಡದ ವಿಷ್ಣು ಮತ್ತು ಅನಿರುದ್ಧ್‌ ಕ್ರಮವಾಗಿ 23 ಮತ್ತು 26ನೇ ನಿಮಿಷಗಳಲ್ಲಿ ಚೆಂಡನ್ನು ಗುರಿ ಮುಟ್ಟಿಸಿದರು. ಎಂಇಜಿ ತಂಡದ ಆಸಿಫ್‌ 90+6ನೇ ನಿಮಿಷದಲ್ಲಿ ಗೋಲು ಬಾರಿಸಿ ಹಿನ್ನಡೆ ತಗ್ಗಿಸಲಷ್ಟೇ ಶಕ್ತರಾದರು.

ADVERTISEMENT

‘ಎ’ ಡಿವಿಷನ್‌ ಲೀಗ್‌ನ ಹೋರಾಟದಲ್ಲಿ ಪೋಸ್ಟಲ್‌ ಎಫ್‌ಸಿ 1–0 ಗೋಲಿನಿಂದ ಡಿವೈಇಎಸ್‌ ಎಫ್‌ಸಿ ಎದುರು ಗೆದ್ದಿತು.

58ನೇ ನಿಮಿಷದಲ್ಲಿ ಸಿಕ್ಕ ಪೆನಾಲ್ಟಿ ಕಾರ್ನರ್‌ನಲ್ಲಿ ಪೋಸ್ಟಲ್‌ ತಂಡದ ವೆಸ್ಟ್‌ಲೀ ಗೋಲು ದಾಖಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.