ADVERTISEMENT

ರಾಹುಲ್‌ ಮಿಂಚು: ರಾಯಲ್ಸ್‌ಗೆ ಜಯ

ಬಿಡಿಎಫ್‌ಎ ‘ಬಿ’ ಡಿವಿಷನ್‌ ಲೀಗ್‌ ಫುಟ್‌ಬಾಲ್‌ ಚಾಂಪಿಯನ್‌ಷಿಪ್‌

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2020, 20:28 IST
Last Updated 5 ಮಾರ್ಚ್ 2020, 20:28 IST

ಬೆಂಗಳೂರು: ರಾಹುಲ್‌ ಗಳಿಸಿದ ಎರಡು ಗೋಲುಗಳ ನೆರವಿನಿಂದ ರಾಯಲ್ಸ್‌ ಎಫ್‌ಸಿ ತಂಡ ಬೆಂಗಳೂರು ಬ್ಲೂಸ್‌ ಕಪ್‌ಗಾಗಿ ನಡೆಯುತ್ತಿರುವ ಬಿಡಿಎಫ್‌ಎ ‘ಬಿ’ ಡಿವಿಷನ್‌ ಲೀಗ್‌ ಫುಟ್‌ಬಾಲ್‌ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ ಗೆದ್ದಿದೆ.

ಸೌತ್‌ ಯುನೈಟೆಡ್‌ ಅಕಾಡೆಮಿಯ ಮೈದಾನದಲ್ಲಿ ಗುರುವಾರ ನಡೆದ ‘ಬಿ’ ಗುಂಪಿನ ಹಣಾಹಣಿಯಲ್ಲಿ ರಾಯಲ್ಸ್‌ 3–1 ಗೋಲುಗಳಿಂದ ಬ್ಲಿಟ್ಜ್‌ ಎಫ್‌ಸಿ ತಂಡವನ್ನು ಸೋಲಿಸಿತು.

ರಾಹುಲ್‌ ಅವರು 8 ಮತ್ತು 28ನೇ ನಿಮಿಷಗಳಲ್ಲಿ ಗೋಲು ಬಾರಿಸಿದರು. 47ನೇ ನಿಮಿಷದಲ್ಲಿ ಚೆಂಡನ್ನು ಗುರಿ ಮುಟ್ಟಿಸಿದ ರಾಬಿನ್‌ಸನ್‌ ಗೆಲುವಿನ ಅಂತರ ಹೆಚ್ಚಿಸಿದರು. ಬ್ಲಿಟ್ಜ್‌ ತಂಡದ ಸಂತೋಷ್‌ 19ನೇ ನಿಮಿಷದಲ್ಲಿ ಗೋಲು ದಾಖಲಿಸಿದರು.

ADVERTISEMENT

ಇನ್ನೊಂದು ಪಂದ್ಯದಲ್ಲಿ ಶ್ರೀ ಗಜಾನನ 4–2 ಗೋಲುಗಳಿಂದ ಮೊಹಮ್ಮದ್‌ ಸ್ಪೋರ್ಟಿಂಗ್‌ ಎಫ್‌ಸಿ ತಂಡವನ್ನು ಮಣಿಸಿತು.

ಗಜಾನನ ತಂಡದ ಸುರೇನ್‌ (65 ಮತ್ತು 70ನೇ ನಿಮಿಷ) ಮೋಡಿ ಮಾಡಿದರು. ಕಯಾವಾನನ್‌ (11) ಮತ್ತು ಭರತ್‌ (12) ತಲಾ ಒಂದು ಗೋಲು ಗಳಿಸಿದರು. ಸ್ಪೋರ್ಟಿಂಗ್‌ ತಂಡದ ಪ್ರೀತಂ ಮತ್ತು ಶರತ್‌ ಅವರು ಕ್ರಮವಾಗಿ 50 ಮತ್ತು 64ನೇ ನಿಮಿಷಗಳಲ್ಲಿ ಕಾಲ್ಚಳಕ ತೋರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.