ADVERTISEMENT

ಫುಟ್‌ಬಾಲ್‌: ಸೆಮಿಫೈನಲ್‌ಗೆ ಪಯನಿಯರ್ಸ್‌

​ಪ್ರಜಾವಾಣಿ ವಾರ್ತೆ
Published 13 ಮೇ 2022, 14:12 IST
Last Updated 13 ಮೇ 2022, 14:12 IST
ಫುಟ್‌ಬಾಲ್
ಫುಟ್‌ಬಾಲ್   

ಬೆಂಗಳೂರು: ಪಯನಿಯರ್ಸ್ ಎಫ್‌ಸಿ ತಂಡ ದಕ್ಷಿಣ ವಲಯ ‘ಸಿ’ ಡಿವಿಷನ್ ಫುಟ್‌ಬಾಲ್ ಟೂರ್ನಿಯ ಸೆಮಿಫೈನಲ್ ಹಂತಕ್ಕೆ ಲಗ್ಗೆ ಇರಿಸಿದೆ. ಶುಕ್ರವಾರ ನಡೆದ ಎಂಟರ ಘಟ್ಟದ ಪಂದ್ಯದಲ್ಲಿ ಪಯನಿಯರ್ಸ್ 2–0ಯಿಂದ ಮಾಜಾಸ್ ಎಫ್‌ಸಿ ವಿರುದ್ಧ ಗೆಲುವು ಸಾಧಿಸಿತು.

70ನೇ ನಿಮಿಷದಲ್ಲಿ ಗೋಲು ಗಳಿಸಿದ ವಸಂತ್‌ ಅವರು ಪಯನಿಯರ್ ತಂಡಕ್ಕೆ ಮುನ್ನಡೆ ತಂದುಕೊಟ್ಟರು. ಎರಡು ನಿಮಿಷಗಳ ನಂತರ ಪ್ರಭಾಕರನ್ ಚೆಂಡನ್ನು ಗುರಿ ಮುಟ್ಟಿಸಿ ತಂಡದ ಗೆಲುವಿನ ಅಂತರವನ್ನು ಹೆಚ್ಚಿಸಿದರು.

ಗನ್ನರ್ಸ್‌ಗೆ ಭರ್ಜರಿ ಗೆಲುವು

ADVERTISEMENT

ಕರ್ನಾಟಕ ರಾಜ್ಯ ಫುಟ್‌ಬಾಲ್ ಸಂಸ್ಥೆಯ ‘ಎ’ ಡಿವಿಷನ್‌ ಪಂದ್ಯದಲ್ಲಿ ಬೆಂಗಳೂರು ಗನ್ನರ್ಸ್ 4–0ಯಿಂದ ಅಂಚೆ ಇಲಾಖೆ ತಂಡವನ್ನು ಮಣಿಸಿತು. ಸಿರಿಲ್ ಜಸ್ಟಿನ್ 13 ಮತ್ತು 35ನೇ ನಿಮಿಷಗಳಲ್ಲಿ ಗೋಲು ಗಳಿಸಿದರೆ ತಮಿಳರಸು 42 ಮತ್ತು 63ನೇ ನಿಮಿಷಗಳಲ್ಲಿ ಚೆಂಡನ್ನು ಗುರಿ ಮುಟ್ಟಿಸಿದರು.

ಇದೇ ಡಿವಿಷನ್‌ನ ಸೌತ್ ಯುನೈಟೆಡ್ ಎಫ್‌ಸಿ ಮತ್ತು ಎಜಿಒಆರ್‌ಸಿ ಎಫ್‌ಸಿ ನಡುವಿನ ಪಂದ್ಯ ಗೋಲುರಹಿತ ಸಮಬಲದಲ್ಲಿ ಮುಕ್ತಾಯಗೊಂಡಿತು. ‘ಬಿ’ ಡಿವಿಷನ್ ಪಂದ್ಯದಲ್ಲಿ ಡಿವೈಇಎಸ್‌ ಎಫ್‌ಸಿ ತಂಡ 1–0ಯಿಂದ ತಿಲಕ್ ಮೆಮೋರಿಯಲ್ಸ್ ಎಫ್‌ಸಿಯನ್ನು ಸೋಲಿಸಿತು. ಚಂದನ್ (59ನೇ ನಿ) ಗೋಲು ಗಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.