ADVERTISEMENT

ಪುಣೆಗೆ ಮೊದಲ ಜಯದ ಪುಳಕ

ಇಂಡಿಯನ್ ಸೂಪರ್ ಲೀಗ್‌: ಮೊದಲಾರ್ಧದಲ್ಲಿ ಗೋಲು ಗಳಿಸಿದ ಡೀಗೊ ಕಾರ್ಲೋಸ್‌, ಸುಮಿತ್ ಪಸಿ

ಪಿಟಿಐ
Published 21 ನವೆಂಬರ್ 2018, 19:56 IST
Last Updated 21 ನವೆಂಬರ್ 2018, 19:56 IST
ಗೋಲು ಗಳಿಸಿದ ಸಂಭ್ರಮದಲ್ಲಿ ಎಫ್‌ಸಿ ಪುಣೆ ತಂಡದ ಆಟಗಾರರು
ಗೋಲು ಗಳಿಸಿದ ಸಂಭ್ರಮದಲ್ಲಿ ಎಫ್‌ಸಿ ಪುಣೆ ತಂಡದ ಆಟಗಾರರು   

ಪುಣೆ: ತವರಿನ ಪ್ರೇಕ್ಷಕರಿಗೆ ರೋಚಕ ಪಂದ್ಯದ ರಸದೌತಣ ನೀಡಿದ ಎಫ್‌ಸಿ ಪುಣೆ ತಂಡ ಇಂಡಿಯನ್ ಸೂಪರ್ ಲೀಗ್‌ (ಐಎಸ್‌ಎಲ್‌) ಐದನೇ ಆವೃತ್ತಿಯ ಮೊದಲ ಜಯದ ಸಂಭ್ರಮದಲ್ಲಿ ಮಿಂದಿತು.

ಇಲ್ಲಿನ ಶಿವ ಛತ್ರಪತಿ ಕ್ರೀಡಾಂಗಣದಲ್ಲಿ ಬುಧವಾರ ರಾತ್ರಿ ನಡೆದ ಪಂದ್ಯದಲ್ಲಿ ಈ ತಂಡ ಜೆಮ್‌ಶೆಡ್‌ಪುರ ಎಫ್‌ಸಿಯನ್ನು 2–1ರಿಂದ ಮಣಿಸಿತು. ಐದನೇ ನಿಮಿಷದಲ್ಲೇ ಗೋಲು ಗಳಿಸಿದ ಡೀಗೊ ಕಾರ್ಲೋಸ್‌ ಆತಿಥೇಯರಿಗೆ ಮುನ್ನಡೆ ಗಳಿಸಿಕೊಟ್ಟರು. ಆದರೆ 10ನೇ ನಿಮಿಷದಲ್ಲಿ ಸುಮಿತ್ ಪಸಿ ಗಳಿಸಿದ ಗೋಲಿನ ಮೂಲಕ ಜೆಮ್‌ಶೆಡ್‌ಪುರ ಸಮಬಲ ಸಾಧಿಸಿತು.

ನಂತರ ಉಭಯ ತಂಡಗಳು ಕೂಡ ಜಿದ್ದಾಜಿದ್ದಿಯ ಹೋರಾಟ ನಡೆಸಿದವು. 86ನೇ ನಿಮಿಷದಲ್ಲಿ ಪುಣೆಗೆ ಫಲ ಸಿಕ್ಕಿತು. ಮ್ಯಾಟ್‌ ಮಿಲ್ ಗಳಿಸಿದ ಗೋಲಿನ ಮೂಲಕ ತಂಡ ಮಹತ್ವದ ಮುನ್ನಡೆ ಸಾಧಿಸಿತು. ನಂತರ ಎದುರಾಳಿಗಳನ್ನು ಕಟ್ಟಿ ಹಾಕಿ ಗೆಲುವಿನ ನಗೆ ಸೂಸಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.