ADVERTISEMENT

‘ಭಾರತದ ಪೆಲೆ’ ಕಣ್ಣನ್ ಅಂತಿಮಯಾತ್ರೆ ಇಂದು

​ಪ್ರಜಾವಾಣಿ ವಾರ್ತೆ
Published 1 ಮೇ 2019, 17:30 IST
Last Updated 1 ಮೇ 2019, 17:30 IST
ಪೊಂಗಂ ಕಣ್ಣನ್‌
ಪೊಂಗಂ ಕಣ್ಣನ್‌   

ಬೆಂಗಳೂರು: ಹಿರಿಯ ಫುಟ್‌ಬಾಲ್ ಆಟಗಾರ ಪೂಂಗಂ ಕಣ್ಣನ್‌ ಅವರ ಪಾರ್ಥೀವ ಶರೀರವನ್ನು ಬುಧವಾರ ರಾತ್ರಿ ಬೆಂಗಳೂರಿಗೆ ತರಲಾಗುತ್ತಿದೆ. ಗೌತಮಪುರಂದಲ್ಲಿರುವ ಅವರ ಮನೆಯ ಹತ್ತಿರದ ಫುಟ್‌ಬಾಲ್ ಕ್ರೀಡಾಂಗಣದಲ್ಲಿ ಅಂತಿಮ ದರ್ಶನಕ್ಕೆ ಇಡಲಾಗಿದೆ. ಮೃತರ ಅಂತಿಮ ವಿಧಿವಿಧಾನಗಳು ಗುರುವಾರ ಮಧ್ಯಾಹ್ನ ನೆರವೇರಲಿವೆ ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ.

ಅವರು ಭಾರತದ ಪೆಲೆ ಎಂದು ಪ್ರಸಿದ್ಧರಾಗಿದ್ದರು. ಫಾರ್ವರ್ಡ್ ಆಟಗಾರರಾಗಿದ್ದಕಣ್ಣನ್‌ ಭಾರತದ ಪರ 14 ಪಂದ್ಯಗಳನ್ನು ಆಡಿದ್ದರು. ಮೋಹನ್ ಬಾಗನ್‌ ಪರ ಎಂಟು ವರ್ಷ ಮತ್ತು ಈಸ್ಟ್ ಬೆಂಗಾಲ್ ತಂಡದಲ್ಲಿ ಎರಡು ವರ್ಷ ಆಡಿದ್ದರು. ಹೋದ ಭಾನುವಾರ ಕೋಲ್ಕತ್ತದಲ್ಲಿ ನಿಧನರಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT