ADVERTISEMENT

ಫುಟ್‌ಬಾಲ್‌: ಬೆಂಗಳೂರು ಯುನೈಟೆಡ್‌ಗೆ ಸೋಲು

ಪಿಟಿಐ
Published 8 ಮೇ 2019, 18:46 IST
Last Updated 8 ಮೇ 2019, 18:46 IST

ಲುಧಿಯಾನ : ಬೆಂಗಳೂರು ಯುನೈಟೆಡ್‌ ಎಫ್‌ಸಿ ತಂಡ ಮಹಿಳಾ ಫುಟ್‌ಬಾಲ್‌ ಲೀಗ್‌ನ ಪಂದ್ಯದಲ್ಲಿ ಸೋತಿದೆ.

ಗುರುನಾನಕ್‌ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪೈಪೋಟಿಯಲ್ಲಿ ಸೇತು ಎಫ್‌ಸಿ 3–0 ಗೋಲುಗಳಿಂದ ಬೆಂಗಳೂರು ಯುನೈಟೆಡ್‌ ಎದುರು ಗೆದ್ದಿತು.

ಸೇತು ಎಫ್‌ಸಿ ತಂಡದ ಸಬಿತ್ರಾ ಭಂಡಾರಿ (11ನೇ ನಿಮಿಷ), ಸಂಧ್ಯಾ (42ನೇ ನಿ.) ಮತ್ತು ಅನಿತಾ ಬಾಸ್ನೆಟ್‌ (75ನೇ ನಿ.) ತಲಾ ಒಮ್ಮೆ ಚೆಂಡನ್ನು ಗುರಿ ಮುಟ್ಟಿಸಿದರು.

ADVERTISEMENT

ಇನ್ನೊಂದು ಪಂದ್ಯದಲ್ಲಿ ಮಣಿಪುರ ಪೊಲೀಸ್‌ 10–0 ಗೋಲುಗಳಿಂದ ಸಾಯ್‌–ಎಸ್‌ಟಿಸಿ ಕಟಕ್‌ ತಂಡದ ಎದುರು ಜಯಭೇರಿ ಮೊಳಗಿಸಿತು.

ವಿಜಯಿ ತಂಡದ ಬಾಲಾದೇವಿ ‘ಹ್ಯಾಟ್ರಿಕ್‌ ಡಬಲ್‌’ ಸಾಧನೆ ಮಾಡಿದರು. ಒಟ್ಟು ಏಳು ಗೋಲು ಗಳಿಸಿ ಗಮನ ಸೆಳೆದರು. ಅವರು 10, 15, 41, 45+2, 54, 78 ಮತ್ತು 83ನೇ ನಿಮಿಷಗಳಲ್ಲಿ ಚೆಂಡನ್ನು ಗುರಿ ಸೇರಿಸಿ ಸಂಭ್ರಮಿಸಿದರು.

ರೀನಾರಾಯ್‌ ದೇವಿ 38 ಮತ್ತು 81ನೇ ನಿಮಿಷಗಳಲ್ಲಿ ಗೋಲು ಹೊಡೆದರು. ದಯಾ ದೇವಿ ಕೂಡಾ ಕಾಲ್ಚಳಕ ತೋರಿದರು. ಅವರು 58ನೇ ನಿಮಿಷದಲ್ಲಿ ಚೆಂಡನ್ನು ಗುರಿ ಮುಟ್ಟಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.