ADVERTISEMENT

ಬಾಕ್ಸಿಂಗ್‌: ಪ್ರಿಕ್ವಾರ್ಟರ್‌ಫೈನಲ್‌ಗೆ ಭವೇಶ್‌

​ಪ್ರಜಾವಾಣಿ ವಾರ್ತೆ
Published 9 ಜೂನ್ 2019, 19:45 IST
Last Updated 9 ಜೂನ್ 2019, 19:45 IST
   

ನವದೆಹಲಿ (ಪಿಟಿಐ): ಯೂತ್‌ ವಿಶ್ವ ಬಾಕ್ಸಿಂಗ್‌ ಕಂಚಿನ ಪದಕ ವಿಜೇತ ಭವೇಶ್‌ ಅವರು ಯೂತ್ ಪುರುಷರ ರಾಷ್ಟ್ರೀಯ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನ 52 ಕೆಜಿ ವಿಭಾಗದಲ್ಲಿ ಪ್ರಿಕ್ವಾರ್ಟರ್‌ಫೈನಲ್‌ ತಲುಪಿದರು. ಉತ್ತರಾಖಂಡದ ರುದ್ರಾಪುರದಲ್ಲಿ ಈ ಟೂರ್ನಿ ನಡೆಯುತ್ತಿದೆ.

ಎಸ್‌ಎಸ್‌ಸಿಬಿ ತಂಡದ ಭವೇಶ್‌ ಅವರು ಭುಮಿತ್‌ ಅವರನ್ನು ಮಣಿಸಿದರು. 91+ ಕೆಜಿ ವಿಭಾಗದಲ್ಲಿ ಏಷ್ಯನ್‌ ಗೇಮ್ಸ್‌ ಕಂಚು ವಿಜೇತ ಅಮನ್‌ ಕೂಡ ಪ್ರಿಕ್ವಾರ್ಟರ್‌ಫೈನಲ್‌ಗೆ ಲಗ್ಗೆಯಿಟ್ಟರು. ಮುಂದಿನ ಪಂದ್ಯದಲ್ಲಿ ಅವರು ದಿಲ್ಲಿಯ ಸನ್ನಿ ದಬಾಸ್‌ ಅವರನ್ನು ಎದುರಿಸುವರು.

ಮಹಿಳೆಯರ60 ಕೆಜಿ ವಿಭಾಗದಲ್ಲಿ ಉತ್ತರಪ್ರದೇಶದ ಅರ್ಪಿತಾ ಖುಶ್ವಾ ಅವರು ಹಿಮಾಚಲ ಪ್ರದೇಶದ ದೀಪಿಕಾ ಎದುರು ಹೀನಾಯವಾಗಿ ಸೋತರು.

ADVERTISEMENT

ಒಟ್ಟು 180 ಮಹಿಳೆಯರು ಹಾಗೂ 248 ಪುರುಷರು ಟೂರ್ನಿಯಲ್ಲಿ ಸ್ಪರ್ಧಿಸುತ್ತಿದ್ದಾರೆ. ಜೂನ್‌ 13ರಂದು ಫೈನಲ್‌ ಪಂದ್ಯ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.