ADVERTISEMENT

ಹ್ಯಾಂಡ್‌ಬಾಲ್‌: ಮಂಡ್ಯ, ಕೊಡಗು ತಂಡಗಳಿಗೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2018, 20:24 IST
Last Updated 30 ನವೆಂಬರ್ 2018, 20:24 IST
ಕಲಬುರ್ಗಿಯಲ್ಲಿ ನಡೆದ ಹ್ಯಾಂಡ್‌ಬಾಲ್ ಟೂರ್ನಿಯ ಬಾಲಕಿಯರ ವಿಭಾಗದಲ್ಲಿ ಜಯಗಳಿಸಿದ ಕೊಡಗು ತಂಡ. (ಎಡದಿಂದ ನಿಂತವರು) ದೀಷ್ಮಾ, ತುಷಾಲಿ ಎ.ಎಲ್‌, ಪ್ರೇಕ್ಷಿತಾ ಬಿ.ಎಸ್, ದೀಕ್ಷಿತಾ ಎಸ್‌, ಗಾನವಿ ಎಂ.ಪಿ, ತೀಯಾ ವರ್ಗೀಸ್, ವೈಡೂರ್ಯ ಕಾವೇರಮ್ಮ, ಯೋಗಿತಾ. (ಎಡದಿಂದ ಕುಳಿತವರು) ಚೈತ್ರಾ, ಅಶ್ವಿತಾ, ಪೃಥ್ವಿ, ಶರಣ್ಯಾ ಕೆ.ಎಸ್, ಅನನ್ಯಾ ಟಿ.ಬಿ, ಪರಿಮಳಾ, ತಾನಿಯಾ ಫಾತಿಮಾ ಮತ್ತು ನೇಹಾ.

ಕಲಬುರ್ಗಿ: ಪದವಿಪೂರ್ವ ಶಿಕ್ಷಣ ಇಲಾಖೆ ಆಯೋಜಿಸಿದ್ದ ಪದವಿಪೂರ್ವ ಕಾಲೇಜುಗಳ ರಾಜ್ಯಮಟ್ಟದ ಹ್ಯಾಂಡ್‌ಬಾಲ್‌ ಟೂರ್ನಿಯ ಬಾಲಕಿಯರ ವಿಭಾಗದಲ್ಲಿ ಕೊಡಗು ಮತ್ತು ಬಾಲಕರ ವಿಭಾಗದಲ್ಲಿ ಮಂಡ್ಯ ತಂಡಗಳು ಪ್ರಶಸ್ತಿ ಗೆದ್ದುಕೊಂಡವು.

ನಗರದ ಚಂದ್ರಶೇಖರ ಪಾಟೀಲ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಫೈನಲ್ ಪಂದ್ಯದಲ್ಲಿ ಮಂಡ್ಯ ತಂಡವು ಧಾರವಾಡ ತಂಡವನ್ನು 21–12ರಲ್ಲಿ ಸೋಲಿಸಿತು. ಕೊಡಗು ತಂಡವು 16–4ರಲ್ಲಿ ಚಿಕ್ಕೋಡಿ ತಂಡವನ್ನು ಮಣಿಸಿತು.

ಬಾಲಕಿಯರ ವಿಭಾಗದ ಸೆಮಿಫೈನಲ್‌ನಲ್ಲಿ ಕೊಡಗು ತಂಡವು 6–2ರಲ್ಲಿ ಬೆಂಗಳೂರು ಗ್ರಾಮೀಣ ಮತ್ತು ಚಿಕ್ಕೋಡಿ ತಂಡವು 7–6ರಲ್ಲಿ ಧಾರವಾಡ ತಂಡಗಳನ್ನು ಸೋಲಿಸಿ ಫೈನಲ್ ಪ್ರವೇಶಿಸಿದ್ದವು.

ADVERTISEMENT

ಬಾಲಕರ ವಿಭಾಗದಲ್ಲಿ ಹಾವೇರಿ ತಂಡದ ತುಷಾರ್ ವಿ. ಉತ್ತಮ ಗೋಲ್ ಕೀಪರ್, ಧಾರವಾಡದ ಎನ್‌.ರುದ್ರಪ್ಪ (14 ಗೋಲು) ಉತ್ತಮ ಶೂಟರ್ ಪ್ರಶಸ್ತಿ ಪಡೆದರು. ಬಾಲಕಿಯರ ವಿಭಾಗದಲ್ಲಿ ಧಾರವಾಡದ ಅರ್ಪಿತಾ ಉತ್ತಮ ಗೋಲ್‌ ಕೀಪರ್ ಮತ್ತು ಕೊಡಗು ತಂಡದ ಗಾನವಿ ಎಂ.ಪಿ (13 ಗೋಲು) ಉತ್ತಮ ಶೂಟರ್ ಪ್ರಶಸ್ತಿ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.