ADVERTISEMENT

ದಾಖಲೆ 4500 ಅಥ್ಲೀಟ್‌ಗಳು ಭಾಗಿ

ರಾಷ್ಟ್ರೀಯ ಅಂತರಜಿಲ್ಲಾ ಜೂನಿಯರ್‌ ಅಥ್ಲೆಟಿಕ್ಸ್ ಕೂಟ

ಪಿಟಿಐ
Published 19 ನವೆಂಬರ್ 2019, 19:12 IST
Last Updated 19 ನವೆಂಬರ್ 2019, 19:12 IST

ತಿರುಪತಿ: ರಾಷ್ಟ್ರೀಯ ಅಂತರಜಿಲ್ಲಾ ಜೂನಿಯರ್‌ ಅಥ್ಲೆಟಿಕ್ಸ್ ಕೂಟವು ಇದೇ23ರಂದು ಇಲ್ಲಿ ಆರಂಭವಾಗಲಿದೆ. 14 ಹಾಗೂ 16 ವರ್ಷದೊಳಗಿನವರ ವಿಭಾಗದಲ್ಲಿ494 ಜಿಲ್ಲೆಗಳಿಂದ ದಾಖಲೆಯ 4500 ಸ್ಪರ್ಧಿಗಳು ಕೂಟದಲ್ಲಿ ಪಾಲ್ಗೊಳ್ಳಲಿದ್ದಾರೆ.

ಹೋದ ವರ್ಷ ತಿರುಪತಿಯಲ್ಲೇ ನಡೆದಿದ್ದ ಕೂಟದಲ್ಲಿ 414 ಜಿಲ್ಲೆಗಳ 4135 ಅಥ್ಲೀಟ್‌ಗಳು ಭಾಗವಹಿಸಿದ್ದರು. ವಿಶಾಖಪಟ್ಟಣದಲ್ಲಿ ನಡೆದ2017ರ ಸಾಲಿನ ಕೂಟಕ್ಕೆ 424 ಜಿಲ್ಲೆಗಳ 424 ಸ್ಪರ್ಧಿಗಳು ಪಾಲ್ಗೊಂಡಿದ್ದರು.

ಈ ವರ್ಷದ ಅಥ್ಲೆಟಿಕ್ಸ್ ಕೂಟಕ್ಕೆ ನೆಸ್ಲೆ ಮಿಲೊ ಪ್ರಮುಖ ಪ್ರಾಯೋಜಕ ಕಂಪೆನಿಯಾಗಿದೆ. ಈವರೆಗೆ 17 ಆವೃತ್ತಿಗಳನ್ನು ಅದು ಆಯೋಜಿಸಿದೆ.

ADVERTISEMENT

‘ಭಾರತ ಅಥ್ಲೆಟಿಕ್ಸ್ ಫೆಡರೇಷನ್‌ (ಎಎಫ್‌ಐ) ಈ ವರ್ಷ 100 ಜಿಲ್ಲೆಗಳಿಗೆ ಹಣಕಾಸು ನೆರವು ನೀಡುತ್ತಿದೆ. ಈ ನೆರವನ್ನು ಶೀಘ್ರ ದೇಶದ ಎಲ್ಲ ಜಿಲ್ಲೆಗಳಿಗೆ ವಿಸ್ತರಿಸುವ ವಿಶ್ವಾಸವಿದೆ’ ಎಂದು ಫೆಡರೇಷನ್‌ ಅಧ್ಯಕ್ಷ ಆದಿಲ್‌ ಸುಮಾರಿವಾಲಾ ಹೇಳಿದ್ದಾರೆ.

ಪ್ರತಿ ಜಿಲ್ಲೆಗೆ 12 ಅಥ್ಲೀಟ್‌ಗಳ ನೋಂದಣಿಗೆ ಮಾತ್ರ ಎಎಫ್‌ಐ ಅವಕಾಶ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.