ಬೆಂಗಳೂರು: ಆನ್‌ಲೈನ್ ಮೂಲಕ ಇತ್ತೀಚೆಗೆ ನಡೆದ ರಾಜ್ಯ ವುಶು ಥಾವುಲು ಚಾಂಪಿಯನ್‌ಷಿಪ್‌ನಲ್ಲಿ ನಗರದ ಹೃತಿಕಾ ಹಾಗೂ ಪ್ರಶಾಂತ್ ಎರಡು ಚಿನ್ನದ ಪದಕ ಗೆದ್ದುಕೊಂಡಿದ್ದಾರೆ.
ಝೂಮ್ ಆ್ಯಪ್ ಮೂಲಕ ಆಯೋಜಿಸಲಾಗಿದ್ದ ಚಾಂಪಿಯನ್‌ಷಿಪ್‌ನಲ್ಲಿ ಬಾಗಲಕೋಟೆ (10 ಚಿನ್ನ, 5 ಬೆಳ್ಳಿ, 6 ಕಂಚು) ಜಿಲ್ಲೆಯು ಅಗ್ರಸ್ಥಾನ ಗಳಿಸಿತು. ಬೆಂಗಳೂರು ದಕ್ಷಿಣ(10 ಚಿನ್ನ, 3 ಬೆಳ್ಳಿ, 1 ಕಂಚು) ಹಾಗೂ ಬೆಂಗಳೂರು ನಗರ (6 ಚಿನ್ನ, 5 ಬೆಳ್ಳಿ, 7 ಕಂಚು) ಕ್ರಮವಾಗಿ ದ್ವಿತೀಯ ಮತ್ತು ತೃತೀಯ ಸ್ಥಾನ ಗಳಿಸಿದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.