ADVERTISEMENT

ಹಾಕಿ: ಬ್ಲ್ಯೂಸ್ಟಾರ್‌ ಕ್ಲಬ್‌ ಜಯಭೇರಿ

​ಪ್ರಜಾವಾಣಿ ವಾರ್ತೆ
Published 20 ಜೂನ್ 2025, 13:24 IST
Last Updated 20 ಜೂನ್ 2025, 13:24 IST
ಹಾಕಿ
ಹಾಕಿ   

ಬೆಂಗಳೂರು: ಬ್ಲ್ಯೂಸ್ಟಾರ್ ಹಾಕಿ ಕ್ಲಬ್ ಬಿ ತಂಡವು ಇಲ್ಲಿ ನಡೆಯುತ್ತಿರುವ 94ನೇ ತಿರುವಾಂಕೂರ್ ಹಾಕಿ ಟೂರ್ನಿಯ ಪಂದ್ಯದಲ್ಲಿ ಜಯಿಸಿತು. 

ಕೆಎಸ್‌ಎಚ್‌ಎ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ಶುಕ್ರವಾರ ಬ್ಲ್ಯೂಸ್ಟಾರ್ ತಂಡವು 5–2ರಿಂದ ನವೀನ್ ಹಾಕಿ ಕ್ಲಬ್‌ ವಿರುದ್ಧ ಜಯಿಸಿತು. ವಿಜೇತ ತಂಡದ ಶ್ರೇಯಸ್ (11ನಿ, 39ನಿ) ,  ಗಾಡ್ವಿನ್ (44ನಿ, 50ನಿ) ಹಾಗೂ ಮಲ್ಲಿಕಾರ್ಜುನ್ (47ನಿ) ಗೋಲು ಗಳಿಸಿದರು. ನವೀನ್ ಹಾಕಿ ಕ್ಲಬ್ ತಂಡದ ದೀಪಕ್ (9ನಿ ಮತ್ತು 15ನಿ) ಎರಡು ಗೋಲು ಹೊಡೆದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT