ಹ್ಯಾಟ್ರಿಕ್ ಪ್ರಶಸ್ತಿಯ ಪ್ರಯತ್ನದಲ್ಲಿರುವ ಸ್ಪೇನ್ ಕಾರ್ಲೋಸ್ ಅಲ್ಕರಾಜ್ ಪ್ರಯಾಸದ ಗೆಲುವಿನೊಂದಿಗೆ ಪುರುಷರ ಸಿಂಗಲ್ಸ್ ಎರಡನೇ ಸುತ್ತು ಪ್ರವೇಶಿಸಿದರು.
ಎರಡನೇ ಶ್ರೇಯಾಂಕದ ಅಲ್ಕರಾಜ್ ಅವರಿಗೆ 7-5, 6-7 (5/7), 7-5, 2-6, 6-1ರಿಂದ ಐದು ಸೆಟ್‌ಗಳ ಹೋರಾಟದಲ್ಲಿ ಇಟಲಿಯ ಅನುಭವಿ ಆಟಗಾರ ಫ್ಯಾಬಿಯೊ ಫೋಗ್ನಿನಿ ಪ್ರಬಲ ಪೈಪೋಟಿ ನೀಡಿದರು. ಉಭಯ ಆಟಗಾರರು ಸೆಂಟರ್ ಕೋರ್ಟ್‌ನಲ್ಲಿ ನಾಲ್ಕು ಗಂಟೆಗಳಿಗೂ ಹೆಚ್ಚು ಹೊತ್ತು ಸೆಣಸಾಟ ನಡೆಸಿದರು.
2010ರಲ್ಲಿ ರೋಜರ್ ಫೆಡರರ್ ಅವರು ಅಲೆಜಾಂಡ್ರೊ ಫಲ್ಲಾ ಅವರನ್ನು ಸೋಲಿಸಿದ ನಂತರ ಇದೇ ಮೊದಲು ವಿಂಬಲ್ಡನ್ ಮೊದಲ ಸುತ್ತಿನಲ್ಲಿ ಹಾಲಿ ಚಾಂಪಿಯನ್ ಐದನೇ ಸೆಟ್‌ಗೆ ತಲುಪಿದರು. 22 ವರ್ಷ ವಯಸ್ಸಿನ ಅಲ್ಕರಾಜ್ ಪಾಲ್ಗೊಂಡ 18 ಗ್ರ್ಯಾನ್‌ಸ್ಲಾಮ್ ಟೂರ್ನಿಗಳಲ್ಲಿ ಒಮ್ಮೆಯೂ ಮೊದಲ ಸುತ್ತಿನಲ್ಲಿ ಸೋತಿಲ್ಲ.
ಈ ತಿಂಗಳ ಆರಂಭದಲ್ಲಿ ಫ್ರೆಂಚ್ ಓಪನ್ ಫೈನಲ್‌ನಲ್ಲಿ ಇಟಲಿಯ ಯಾನಿಕ್ ಸಿನ್ನರ್ ಅವರನ್ನು ಸೋಲಿಸಿದ ಅಲ್ಕರಾಜ್ ಫ್ರೆಂಚ್ ಓಪನ್ ಕಿರೀಟ ಮುಡಿಗೇರಿಸಿಕೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.