ADVERTISEMENT

ಹಾಕಿ: ಆಕಾಶದೀಪ್ ಹ್ಯಾಟ್ರಿಕ್ ವ್ಯರ್ಥ: ಆಸ್ಟ್ರೇಲಿಯಾಕ್ಕೆ ಜಯ

ಪಿಟಿಐ
Published 26 ನವೆಂಬರ್ 2022, 13:18 IST
Last Updated 26 ನವೆಂಬರ್ 2022, 13:18 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಅಡಿಲೇಡ್‌: ಆಕಾಶ್‌ದೀಪ್‌ ಸಿಂಗ್‌ ಗಳಿಸಿದ ಹ್ಯಾಟ್ರಿಕ್ ಗೋಲುಗಳು ವ್ಯರ್ಥವಾದವು. ಭಾರತ ಹಾಕಿ ತಂಡವು ಇಲ್ಲಿ ನಡೆದ ಆಸ್ಟ್ರೇಲಿಯಾ ಎದುರಿನ ಪಂದ್ಯದಲ್ಲಿ 4–5ರಿಂದ ಸೋಲನುಭವಿಸಿತು.

ಶನಿವಾರ ನಡೆದ ಐದು ಪಂದ್ಯಗಳ ಸರಣಿಯ ಮೊದಲ ಹಣಾಹಣಿಯಲ್ಲಿ ಆಕಾಶ್‌ದೀಪ್‌ 10, 27 ಮತ್ತು 59ನೇ ನಿಮಿಷಗಳಲ್ಲಿ ಕೈಚಳಕ ತೋರಿದರು. 31ನೇ ನಿಮಿಷದಲ್ಲಿ ಹರ್ಮನ್‌ಪ್ರೀತ್ ಸಿಂಗ್‌ ಅವರು ಪೆನಾಲ್ಟಿ ಕಾರ್ನರ್‌ಅನ್ನು ಗೋಲಿನಲ್ಲಿ ಪರಿವರ್ತಿಸಿದರು.

ಆಸ್ಟ್ರೇಲಿಯಾ ತಂಡಕ್ಕಾಗಿ ಲಚ್ಲಾನ್ ಶಾರ್ಪ್‌ (5ನೇ ನಿ.), ನೇಥನ್‌ ಎಪ್ರಮ್ಸ್ (21ನೇ ನಿ.), ಟಾಮ್‌ ಕ್ರೇಗ್‌ (41ನೇ ನಿ.) ಮತ್ತು ಬ್ಲೇಕ್‌ ಗೋವರ್ಸ್ (57 ಮತ್ತು 60ನೇ ನಿ.) ಗೋಲು ದಾಖಲಿಸಿದರು.

ADVERTISEMENT

ಆರಂಭದಲ್ಲಿ 4–3ರಿಂದ ಮುನ್ನಡೆ ಕಾಯ್ದುಕೊಂಡಿದ್ದ ಹರ್ಮನ್‌ಪ್ರೀತ್ ಸಿಂಗ್ ನಾಯಕತ್ವದ ತಂಡ ಕೊನೆಯ ಕ್ಷಣಗಳಲ್ಲಿ ಪಂದ್ಯವನ್ನು ಕೈಚೆಲ್ಲಿತು.

ಪೆನಾಲ್ಟಿ ಕಾರ್ನರ್‌ ಅವಕಾಶಗಳನ್ನು ಗೋಲಾಗಿಸುವಲ್ಲಿ ಎಡವಿದ್ದು ಭಾರತ ತಂಡದ ಸೋಲಿಗೆ ಕಾರಣವಾಯಿತು.

ಉಭಯ ತಂಡಗಳ ನಡುವಣ ಎರಡನೇ ಪಂದ್ಯವು ಭಾನುವಾರ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.