ADVERTISEMENT

ಬೈಸಿಕಲ್‌ ಹರಾಜಿಗಿಡಲಿರುವ ಆಲ್ಬರ್ಟೊ ಕಾಂಟಾಡೋರ್‌

ಏಜೆನ್ಸೀಸ್
Published 9 ಏಪ್ರಿಲ್ 2020, 19:55 IST
Last Updated 9 ಏಪ್ರಿಲ್ 2020, 19:55 IST

ಮ್ಯಾಡ್ರಿಡ್‌ : ಕೊರೊನಾ ವೈರಸ್‌ ಪಿಡುಗಿನ ವಿರುದ್ಧ ಹೋರಾಟದ ಭಾಗವಾಗಿ ನಿಧಿ ಎತ್ತಲು ಸ್ಪೇನ್‌ನ ಹಿರಿಯ ರ‍್ಯಾಲಿಪಟು ಆಲ್ಬರ್ಟೊ ಕಾಂಟಾಡೋರ್‌ ಅವರು ತಮ್ಮ ಬೈಸಿಕಲ್‌ ಹರಾಜಿಗೆ ಇಡಲಿದ್ದಾರೆ.‌ ಈ ಬೈಸಿಕಲ್‌ನಲ್ಲಿ ಅವರು ಟೂರ್‌ ಆಫ್‌ ಇಟಲಿ ಮತ್ತು ಟೂರ್ ಡಿ ಫ್ರಾನ್ಸ್‌ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು.

ಅವರು ಗುರುವಾರ ಈ ವಿಷಯ ತಿಳಿಸಿದ್ದಾರೆ. ಈ ಬೈಸಿಕಲ್‌ನಲ್ಲಿ ಅವರು 2011ರ ಟೂರ್‌ ಡಿ ಇಟಲಿ ಮತ್ತು ಟೂರ್‌ ಡಿ ಫ್ರಾನ್ಸ್‌ ರ‍್ಯಾಲಿಗಳಲ್ಲಿ ಸವಾರಿ ಮಾಡಿದ್ದರು. ಇಟಲಿ ಸ್ಪರ್ಧೆಯಲ್ಲಿ ಜಯಿಸಿದ್ದ ಅವರು ಫ್ರಾನ್ಸ್‌ನ ಸ್ಪರ್ಧೆ ಯನ್ನು ಐದನೆಯವರಾಗಿ ಮುಗಿಸಿದ್ದರು. 2017ರಲ್ಲಿ ನಿವೃತ್ತರಾಗಿದ್ದರು.

‘ಕೋವಿಡ್‌ –19 ವಿರುದ್ಧ ಹೋರಾಟ ಮುಂದುವರಿಯಲಿದೆ. ಇದಕ್ಕಾಗಿ ವಿಶೇಷ ಪ್ರಯತ್ನ ನಡೆಸುತ್ತಿದ್ದೇನೆ. ಬೈಸಿಕಲ್‌ ಹರಾಜಿನಿಂದ ಬಂದ ಹಣವನ್ನು ರೆಡ್‌ಕ್ರಾಸ್‌ಗೆ ದೇಣಿಗೆಯಾಗಿ ನೀಡುತ್ತೇನೆ‘ ಎಂದಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.