ADVERTISEMENT

ಅನುರಾ ರೋಹನ್‌ ಪ್ರಶಸ್ತಿಯತ್ತ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2018, 20:07 IST
Last Updated 8 ಡಿಸೆಂಬರ್ 2018, 20:07 IST

ಬೆಂಗಳೂರು: ಮೊದಲ ದಿನದಲ್ಲೇ ಉತ್ತಮ ಸಾಮರ್ಥ್ಯ ತೋರಿದ್ದ ಶ್ರೀಲಂಕಾದ ಅನುರಾ ರೋಹನ್‌ ಅವರು ಬೆಂಗಳೂರು ಓಪನ್ ಗಾಲ್ಫ್‌ ಚಾಂಪಿಯನ್‌ಷಿಪ್‌ನ ಪ್ರಶಸ್ತಿಯತ್ತ ಹೆಜ್ಜೆ ಹಾಕಿದ್ದಾರೆ. ಕರ್ನಾಟಕ ಗಾಲ್ಫ್‌ ಸಂಸ್ಥೆಯ ಆವರಣದಲ್ಲಿ ನಡೆಯುತ್ತಿರುವ ಚಾಂಪಿಯನ್‌ಷಿಪ್‌ ಎರಡನೇ ದಿನವಾದ ಶನಿವಾರ ಮೂರನೇ ಸುತ್ತಿನ ಕೊನೆಯಲ್ಲಿ ಅಗ್ರಸ್ಥಾನದಲ್ಲಿ ಮುಂದುವರಿದಿದ್ದಾರೆ. ಸತತ ಎರಡನೇ ಸುತ್ತಿನಲ್ಲು ತಪ್ಪು ಎಸಗದೇ ಮುಂದೆ ಸಾಗಿದ 45 ವರ್ಷದ ಅನುರಾ ಸಂಪೂರ್ಣ ಆಧಿಪತ್ಯ ಸ್ಥಾಪಿಸಿದರು.‌ ಓಂಪ್ರಕಾಶ್ ಚೌಹಾಣ್ ಮತ್ತು ರಶೀದ್‌ ಖಾನ್‌ ಜಂಟಿ ಎರಡನೇ ಸ್ಥಾನದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.