ADVERTISEMENT

ಕುಸ್ತಿ: ಅರ್ಜುನ ಹಲಕುರ್ಕಿಗೆ ಚಿನ್ನ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2019, 16:36 IST
Last Updated 1 ಡಿಸೆಂಬರ್ 2019, 16:36 IST
ಅರ್ಜುನ ಹಲಕುರ್ಕಿ
ಅರ್ಜುನ ಹಲಕುರ್ಕಿ   

ಬೆಂಗಳೂರು: ಲುಧಿಯಾನದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಕುಸ್ತಿ ಚಾಂಪಿಯನ್‌ಷಿಪ್‌ನ ಮೂರನೇ ದಿನವಾದ ಭಾನುವಾರ ಕರ್ನಾಟಕದ ಅರ್ಜುನ ಹಲಕುರ್ಕಿ ಚಿನ್ನದ ಪದಕ ಗಳಿಸಿದರು. 55 ಕೆ.ಜಿ. ಗ್ರೀಕೊ ರೋಮನ್ ವಿಭಾಗದಲ್ಲಿ ಅವರು ಈ ಸಾಧನೆ ಮಾಡಿದರು.

ಫೈ‌ನಲ್‌ನಲ್ಲಿ ಅವರು ಹರಿಯಾಣದ ಅಜಯ್ ವಿರುದ್ಧ 8-0 ಅಂತರದ ಗೆಲುವು ಸಾಧಿಸಿದರು. ಸರ್ವಿಸಸ್ ಕ್ರೀಡಾ ನಿಯಂತ್ರಣ ಮಂಡಳಿ (ಎಸ್‌ಎಸ್‌ಸಿಬಿ) ಪ್ರತಿನಿಧಿಸುತ್ತಿರುವ ಅರ್ಜುನ, ದಾವಣಗೆರೆ ಕ್ರೀಡಾನಿಲಯದಲ್ಲಿ ಅಭ್ಯಾಸ ಮಾಡುತ್ತಿದ್ದಾರೆ. ಭಾನುವಾರದ ಜಯದೊಂದಿಗೆ ಅವರು ಸ್ಯಾಫ್ ಕೂಟಕ್ಕೆ ಅರ್ಹತೆಯನ್ನೂ ಗಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT