ADVERTISEMENT

ಥಾಯ್ಲೆಂಡ್‌ ಓಪನ್ ಬ್ಯಾಡ್ಮಿಂಟನ್ ಟೂರ್ನಿ: ಮುಖ್ಯ ಸುತ್ತಿಗೆ ಅಸ್ಮಿತಾ, ಮಾಳವಿಕಾ

ಪಿಟಿಐ
Published 17 ಮೇ 2022, 12:28 IST
Last Updated 17 ಮೇ 2022, 12:28 IST
ಅಸ್ಮಿತಾ ಚಲಿಹಾ (ಮಧ್ಯೆ)– ಪ್ರಜಾವಾಣಿ ಸಂಗ್ರಹ
ಅಸ್ಮಿತಾ ಚಲಿಹಾ (ಮಧ್ಯೆ)– ಪ್ರಜಾವಾಣಿ ಸಂಗ್ರಹ   

ಬ್ಯಾಂಕಾಕ್‌: ಭಾರತದ ಅಸ್ಮಿತಾ ಚಲಿಹಾ ಮತ್ತು ಮಾಳವಿಕಾ ಬನ್ಸೋಡ್ ಅವರು ಥಾಯ್ಲೆಂಡ್‌ ಓಪನ್ ಸೂಪರ್ 500 ಬ್ಯಾಡ್ಮಿಂಟನ್ ಟೂರ್ನಿಯ ಮುಖ್ಯ ಸುತ್ತಿಗೆ ಪ್ರವೇಶಿಸಿದ್ದಾರೆ.

ಮಹಿಳಾ ಸಿಂಗಲ್ಸ್ ಅರ್ಹತಾ ಸುತ್ತಿನ ಪಂದ್ಯಗಳಲ್ಲಿ ಅಸ್ಮಿತಾ21-16, 21-18ರಿಂದ ಅಮೆರಿಕದ ಜೆನ್ನಿ ಗೈ ಅವರನ್ನು ಸೋಲಿಸಿದರೆ, ಮಾಳವಿಕಾ ಅವರು21-18, 21-8ರಿಂದ ಭಾರತದವರೇ ಆದ ಅನುಪಮಾ ಉಪಾಧ್ಯಾಯ ಅವರನ್ನು ಪರಾಭವಗೊಳಿಸಿದರು.

ಪ್ರಿಯಾಂಶು ರಾಜಾವತ್‌, ಕಿರಣ್ ಜಾರ್ಜ್‌ ಮತ್ತು ಶುಭಂಕರ್ ಡೇ ಅವರು ಮುಖ್ಯ ಸುತ್ತು ಪ್ರವೇಶಸಿಸುವಲ್ಲಿ ವಿಫಲರಾದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.