ADVERTISEMENT

ಅರ್ಜುನ ‍‍ಪ್ರಶಸ್ತಿ ಆಯ್ಕೆ ಸಮಿತಿಯಲ್ಲಿ ಅಶ್ವಿನಿ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2018, 18:18 IST
Last Updated 10 ಸೆಪ್ಟೆಂಬರ್ 2018, 18:18 IST
ಅಶ್ವಿನಿ ನಾಚಪ್ಪ
ಅಶ್ವಿನಿ ನಾಚಪ್ಪ   

ನವದೆಹಲಿ: ಹಿರಿಯ ಅಥ್ಲೀಟ್‌ ಅಶ್ವಿನಿ ನಾಚಪ್ಪ ಮತ್ತು ರಾಷ್ಟ್ರೀಯ ಬ್ಯಾಡ್ಮಿಂಟನ್‌ ತರಬೇತುದಾರರಾಗಿದ್ದ ವಿಮಲ್‌ ಕುಮಾರ್ ಅವರನ್ನು ಅರ್ಜುನ ಪ್ರಶಸ್ತಿ ಆಯ್ಕೆ ಸಮಿತಿಗೆ ಕ್ರೀಡಾ ಸಚಿವಾಲಯ ನೇಮಕ ಮಾಡಿದೆ.

ಸಮಿತಿಗೆ ದೆಹಲಿ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಇಂದರ್‌ಮಿತ್‌ ಕೌಲ್‌ ಕೊಚಾರ್ ಅವರು ಮುಖ್ಯಸ್ಥರಾಗಿದ್ದು ಮೂವರು ಹಿರಿಯ ಕ್ರೀಡಾ ಪತ್ರಕರ್ತರು ಕೂಡ ಸದಸ್ಯರಾಗಿರುತ್ತಾರೆ.

ಈ ಕುರಿತು ಸುದ್ದಿಸಂಸ್ಥೆಯ ಜೊತೆ ಮಾತನಾಡಿದ ಅಶ್ವಿನಿ ಅವರು ತಮಗೆ ಮೌಖಿಕವಾಗಿ ಆಹ್ವಾನ ಬಂದಿದ್ದು ಅಧಿಕೃತ ಪತ್ರಕ್ಕಾಗಿ ಕಾಯುತ್ತಿರುವುದಾಗಿ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.