ADVERTISEMENT

ಏಷ್ಯಾ ರ‍್ಯಾಲಿ ಕಪ್: ಗಿಲ್‌ಗೆ ಅಗ್ರಸ್ಥಾನ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2023, 19:25 IST
Last Updated 19 ಮಾರ್ಚ್ 2023, 19:25 IST
ಗೌರವ್ ಗಿಲ್‌ (ಎಡ) ಮತ್ತು ಅನಿರುದ್ಧ ರಂಗನೇಕರ್‌
ಗೌರವ್ ಗಿಲ್‌ (ಎಡ) ಮತ್ತು ಅನಿರುದ್ಧ ರಂಗನೇಕರ್‌   

ಚೆನ್ನೈ : ಭಾರತದ ಗೌರವ್ ಗಿಲ್‌ ಅವರು ಇಲ್ಲಿ ನಡೆದ ಎಫ್‌ಐಎ ಏಷ್ಯಾ ಪೆಸಿಫಿಕ್‌ ರ‍್ಯಾಲಿ ಚಾಂಪಿಯನ್‌ಷಿಪ್‌ನ (ಏಷ್ಯಾ ರ‍್ಯಾಲಿ ಕಪ್‌) ಎರಡನೇ ಸುತ್ತಿನಲ್ಲಿ ಅಗ್ರಸ್ಥಾನ ಗಳಿಸಿದರು. ಇದರೊಂದಿಗೆ ದಕ್ಷಿಣ ಭಾರತ ರ‍್ಯಾಲಿ ಭಾನುವಾರ ಮುಕ್ತಾಯವಾಯಿತು.

ಅನಿರುದ್ಧ ರಂಗನೇಕರ್ ಜೊತೆಗೂಡಿದ ಗಿಲ್‌ 1 ತಾಸು 50 ನಿಮಿಷ 23 ಸೆಕೆಂಡುಗಳಲ್ಲಿ ಗುರಿ ತಲುಪಿದರು. ಅವರು ಸುಬಾರು ಇಂಪ್ರೆಜಾ ತಂಡವನ್ನು ಪ್ರತಿನಿಧಿಸಿದ್ದರು. ಟೊಯೊಟಾ ತಂಡ ಪ್ರತಿನಿಧಿಸಿದ್ದ ಥಾಯ್ಲೆಂಡ್‌ನ ಮಾನಾ ಪಾರ್ನಿರಿಚರ್ಡ್‌ ಮತ್ತು ಸಹ ಸ್ಪರ್ಧಿ ಥಾನ್ಯಾಪತ್‌ ಮೀನಿಲ್‌ ಎರಡನೇ ಸ್ಥಾನ ಗಳಿಸಿದರು. ಮೂರನೇ ಸ್ಥಾನವು ಅಮೃತರಾಜ್ ಘೋಷ್‌–ಅಶ್ವಿನ್ ನಾಯ್ಕ್‌ ಅವರ ಪಾಲಾಯಿತು.

ಮಂಗಳೂರಿನ ಆರೂರ್ ಅರ್ಜುನ್‌ ರಾವ್‌ ಮತ್ತು ಸಹ ಸ್ಪರ್ಧಿ ಸತೀಶ್ ರಾಜಗೋಪಾಲ್‌ ಅವರು ಎಫ್‌ಎಂಎಸ್‌ಸಿಐ ಇಂಡಿಯನ್ ನ್ಯಾಷನಲ್ ರ‍್ಯಾಲಿ ಚಾಂಪಿಯನ್‌ಷಿಪ್‌ನ ಸಮಗ್ರ ಪ್ರಶಸ್ತಿ ತಮ್ಮದಾಗಿಸಿಕೊಂಡರು. ಐಎನ್‌ಆರ್‌ಸಿ–2 ವಿಭಾಗದಲ್ಲಿ ಸಾಹಿಲ್ ಖನ್ನಾ– ಕೆ.ಎನ್‌. ಗೌಡ, ಐಎನ್‌ಆರ್‌ಸಿ–3 ವಿಭಾಗದಲ್ಲಿ ಡೇರಿಯಸ್‌ ಶ್ರಾಫ್‌ ಮತ್ತು ಶಾಹಿಸ್‌ ಸಲ್ಮಾನ್‌ ಅಗ್ರಸ್ಥಾನ ಗಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.