ADVERTISEMENT

ಏಷ್ಯನ್‌ ಕ್ರೀಡಾಕೂಟ ಬಾಕ್ಸಿಂಗ್‌: ಕ್ವಾರ್ಟರ್ ಫೈನಲ್‌ಗೆ ಪವಿತ್ರಾ

ಪಿಟಿಐ
Published 25 ಆಗಸ್ಟ್ 2018, 17:38 IST
Last Updated 25 ಆಗಸ್ಟ್ 2018, 17:38 IST
ಭಾರತದ ಪವಿತ್ರ (ಎಡ) ಮತ್ತು ಪಾಕಿಸ್ತಾನದ ರುಕ್ಸಾನ ಪರ್ವೀನ್ ನಡುವಿನ್ ಸೆಣಸಾಟದ ರೋಚಕ ಕ್ಷಣ ಎಎಫ್‌ಪಿ ಚಿತ್ರ
ಭಾರತದ ಪವಿತ್ರ (ಎಡ) ಮತ್ತು ಪಾಕಿಸ್ತಾನದ ರುಕ್ಸಾನ ಪರ್ವೀನ್ ನಡುವಿನ್ ಸೆಣಸಾಟದ ರೋಚಕ ಕ್ಷಣ ಎಎಫ್‌ಪಿ ಚಿತ್ರ   

ಜಕಾರ್ತ: ಮಹಿಳೆಯರ ಬಾಕ್ಸಿಂಗ್‌ನಲ್ಲಿ ಭಾರತದ ಪವಿತ್ರ ಭರವಸೆ ಮೂಡಿಸಿದ್ದಾರೆ.

ಶನಿವಾರ ನಡೆದ 60 ಕೆಜಿ ವಿಭಾಗದ ಮೊದಲ ಸುತ್ತಿನ ಸ್ಪರ್ಧೆಯಲ್ಲಿ ಅವರು ಪಾಕಿಸ್ತಾನದ ರುಕ್ಸಾನಾ ಪರ್ವೀನ್ ಅವರನ್ನು ಸೋಲಿಸಿ ಕ್ವಾರ್ಟರ್‌ಫೈನಲ್ ಪ್ರವೇಶಿಸಿದರು.

ರಾಷ್ಟ್ರೀಯ ಚಾಂಪಿಯನ್ ಆಗಿದ್ದ ಪವಿತ್ರಾ ಪಾಕಿಸ್ತಾನದ ಬಾಕ್ಸಿಂಗ್ ಪಟು ವಿರುದ್ಧ ಅಸಾಮಾನ್ಯ ಸಾಮರ್ಥ್ಯ ತೋರಿದರು. ಎದುರಾಳಿಯನ್ನು ಎರಡು ಬಾರಿ ನೆಲಕ್ಕೆ ಕೆಡವಿ ಮೆರೆದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.