ADVERTISEMENT

ಬಾಕ್ಸಿಂಗ್‌: ಶಿವಂ, ಮೌಸಂಗೆ ಜಯ

ಪಿಟಿಐ
Published 3 ಆಗಸ್ಟ್ 2025, 15:58 IST
Last Updated 3 ಆಗಸ್ಟ್ 2025, 15:58 IST
ಬಾಕ್ಸಿಂಗ್‌– ಪ್ರಾತಿನಿಧಿಕ ಚಿತ್ರ
ಬಾಕ್ಸಿಂಗ್‌– ಪ್ರಾತಿನಿಧಿಕ ಚಿತ್ರ   

ಬ್ಯಾಂಕಾಕ್‌: ಭಾರತದ ಶಿವಂ ಹಾಗೂ ಮೌಸಂ ಸುಹಾಗ್‌ ಅವರು ಇಲ್ಲಿ ನಡೆಯುತ್ತಿರುವ 19 ವರ್ಷದೊಳಗಿನವರ ಏಷ್ಯನ್‌ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ  ಮುನ್ನಡೆ ಸಾಧಿಸಿದರು.

ಪುರುಷರ 55 ಕೆ.ಜಿ ವಿಭಾಗದಲ್ಲಿ ಕಣಕ್ಕಿಳಿದಿರುವ ಶಿವಂ, ಭಾನುವಾರ ನಡೆದ ಪಂದ್ಯದಲ್ಲಿ ತುರ್ಕಮೆನಿಸ್ತಾನದ ಬೆಝಿರ್ಜನ್‌ ಅನ್ನಾಯೆವ್‌ ಎದುರು ಮೂರೂ ಸುತ್ತುಗಳಲ್ಲಿ ಪ್ರಾಬಲ್ಯ ಸಾಧಿಸಿ ಗೆಲುವು ತಮ್ಮದಾಗಿಸಿಕೊಂಡರು. ಮೌಸಂ ಅವರು 65 ಕೆ.ಜಿ ವಿಭಾಗದಲ್ಲಿ ಕಜಕಸ್ತಾನದ ನುರ್ಕಬೈಲುಲಿ ಮಖಿತ್‌ ವಿರುದ್ಧ 3:2ರಿಂದ ಜಯ ಸಾಧಿಸಿದರು.

ಆದರೆ, 60 ಕೆ.ಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ಶುಭಂ ಅವರು ಕಜಕಸ್ತಾನದ ಟಾರ್ಟುಬೆಕ್‌ ಅಡಿಲೆಟ್‌ ಎದುರು 5–0ಯಿಂದ ಪರಾಭವಗೊಂಡರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.