ADVERTISEMENT

ಏಷ್ಯನ್ ಅಂಡರ್‌ 15 ಬಾಕ್ಸಿಂಗ್‌: ಸೆಮಿಫೈನಲ್‌ಗೆ ಭಾರತದ ಐವರು

ಪಿಟಿಐ
Published 24 ಏಪ್ರಿಲ್ 2025, 13:55 IST
Last Updated 24 ಏಪ್ರಿಲ್ 2025, 13:55 IST
ಬಾಕ್ಸಿಂಗ್‌– ಪ್ರಾತಿನಿಧಿಕ ಚಿತ್ರ
ಬಾಕ್ಸಿಂಗ್‌– ಪ್ರಾತಿನಿಧಿಕ ಚಿತ್ರ   

ಅಮ್ಮಾನ್‌ (ಜೋರ್ಡಾನ್): ಬಾಲಕರ ವಿಭಾಗದಲ್ಲಿ ಮೂವರು ಸೇರಿದಂತೆ ಭಾರತದ ಐವರು ಬಾಕ್ಸರ್‌ಗಳು, ಇಲ್ಲಿ ನಡೆಯುತ್ತಿರುವ ಏಷ್ಯನ್ 15 ವರ್ಷದೊಳಗಿನವರ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಸೆಮಿಫೈನಲ್‌ಗೆ ಮುನ್ನಡೆದಿದ್ದಾರೆ.

ಸ್ಪರ್ಧೆಗಳ ಐದನೇ ದಿನವಾದ ಬುಧವಾರ, 55 ಕೆ.ಜಿ. ವಿಭಾಗದ ಕ್ವಾರ್ಟರ್‌ಫೈನಲ್‌ನಲ್ಲಿ ಭಾರತದ ನೆಲ್ಸನ್‌ ಖ್ಕ್ವೈರಾಕ್‌ಪಂ ಅವರು ಚೀನಾ ತೈಪೆಯ ವಾಂಗ್‌ ಶೆಂಗ್‌–ಯಾಂಗ್ ಅವರನ್ನು ಮೊದಲ ಸುತ್ತಿನಲ್ಲಿ ಆರ್‌ಎಸ್‌ಸಿ (ರೆಫ್ರಿ ಸ್ಟಾಪ್ಸ್‌ ಕಂಟೆಸ್ಟ್‌) ಆಧಾರದಲ್ಲಿ ಸೋಲಿಸಿದರು.

ಅಭಿಜಿತ್‌ (61 ಕೆ.ಜಿ.) ಮತ್ತು ಲಕ್ಷಯ್‌ ಪಂಡಿತ್ (64 ಕೆ.ಜಿ) ಅವರು ಎಂಟರ ಘಟ್ಟದ ಪಂದ್ಯದಲ್ಲಿ ಕ್ರಮವಾಗಿ ಕಿರ್ಗಿಸ್ತಾನ ಮತ್ತು ಜೋರ್ಡಾನ್‌ನ ಎದುರಾಳಿಗಳ ವಿರುದ್ಧ 5–0 ಗೆಲುವು ಸಾಧಿಸಿದರು.

ADVERTISEMENT

ಬಾಲಕಿಯರ ವಿಭಾಗದಲ್ಲಿ ಪ್ರಿನ್ಸಿ (52 ಕೆ.ಜಿ) 5–0 ಯಿಂದ ಉಕ್ರೇನ್‌ನ ಯೆವಾ ಕುಬನೋವಾ ಅವರನ್ನು ಮಣಿಸಿದರು. ಸಮೃದ್ಧಿ ಸತೀಶ್‌ ಶಿಂದೆ 55 ಕೆ.ಜಿ ವಿಭಾಗದ ಮೂರನೇ ಸುತ್ತಿನಲ್ಲಿ ಆರ್‌ಎಸ್‌ಸಿ ಆಧಾರದಲ್ಲಿ ಉಕ್ರೇನ್‌ನ ಕ್ಸೇನಿಯಾ ಸವಿನಾ ಅವರನ್ನು ಮಣಿಸಿದರು.

ಭಾರತದ ಇತರ ಆರು ಮಂದಿ ಮಂಗಳವಾರವೇ ಸಮಿಫೈನಲ್ ತಲುಪಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.