ಬೆಂಗಳೂರು: ನಗರದ ಅಥರ್ವ ನವರಂಗೆ ಅವರು ಮಲ್ಲೇಶ್ವರಂ ಅಸೋಸಿಯೇಷನ್ ಆಶ್ರಯದಲ್ಲಿ ನಡೆಯುತ್ತಿರುವ 5ನೇ ರಾಜ್ಯ ರ‍್ಯಾಂಕಿಂಗ್ ಟೇಬಲ್ ಟೂರ್ನಿಯಲ್ಲಿ ಮಂಗಳವಾರ ಪುರುಷರ ಸಿಂಗಲ್ಸ್ ಪ್ರಶಸ್ತಿ ಗೆದ್ದುಕೊಂಡರು. 17 ವರ್ಷದೊಳಗಿನವರ ಬಾಲಕಿಯರ ಸಿಂಗಲ್ಸ್‌ನಲ್ಲಿ ತನಿಷ್ಕಾ ಕಪಿಲ್ ಕಾಲಭೈರವ ಅವರು ಚಾಂಪಿಯನ್ ಆದರು.
ಅಸೋಸಿಯೇಷನ್‌ನ ಸಭಾಂಗಣದಲ್ಲಿ ನಡೆದ ಟೂರ್ನಿಯ ಫೈನಲ್‌ನಲ್ಲಿ ಅಥರ್ವ 12–14, 11–2, 11–6, 11–9, 8–11, 8–11, 11–5 ರಿಂದ ಸಂಜಯ್ ಮಾಧವನ್ ಅವರನ್ನು ಸೋಲಿಸಿದರು.
ಸೆಮಿಫೈನಲ್ ಪಂದ್ಯಗಳಲ್ಲಿ ಅಥರ್ವ 11–6, 15–13, 8–11, 12–10, 11–8 ರಿಂದ ಎಂ.ಕಲೈವಣ್ಣನ್ ಅವರನ್ನು, ಸಂಜಯ್ 11–8, 12–10, 11–1, 8–11, 11–8 ರಿಂದ ಯಶವಂತ್ ಪಿ. ಅವರನ್ನು ಮಣಿಸಿದರು.
17 ವರ್ಷದೊಳಗಿನ ಬಾಲಕಿಯರ ಫೈನಲ್‌ನಲ್ಲಿ 11–8, 14–12, 8–11, 11–3 ರಿಂದ ಹಿಯಾ ಸಿಂಗ್ ಅವರನ್ನು ಮಣಿಸಿದರು. ಸೆಮಿಫೈನಲ್ ಪಂದ್ಯಗಳಲ್ಲಿ ತನಿಷ್ಕಾ ಹಿನ್ನಡೆಯಿಂದ ಚೇತರಿಸಿಕೊಂಡು 8–11, 12–14, 11–9, 11–5, 11–5 ರಿಂದ ಹಿಮಾಂಶಿ ಚೌಧರಿ ವಿರುದ್ಧ, ಹಿಯಾ ಸದಿಂಗ್ 11–8, 16–14, 11–5 ರಿಂದ ಲಕ್ಷ್ಮಿ ಆಶ್ರಿತಾ ಅವರನ್ನು ಸೋಲಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.