ADVERTISEMENT

Taipei Open: ಆಯುಷ್‌, ಉನ್ನತಿಗೆ ನಿರಾಸೆ

ಪಿಟಿಐ
Published 10 ಮೇ 2025, 16:03 IST
Last Updated 10 ಮೇ 2025, 16:03 IST
ಆಯುಷ್‌ ಶೆಟ್ಟಿ
ಆಯುಷ್‌ ಶೆಟ್ಟಿ   

ತೈಪೆ: ಯುವ ತಾರೆಯರಾದ ಆಯುಷ್‌ ಶೆಟ್ಟಿ ಮತ್ತು ಉನ್ನತಿ ಹೂಡಾ ಅವರು  ತೈಪೆ ಓಪನ್‌ ಸೂಪರ್‌ 300 ಬ್ಯಾಡ್ಮಿಂಟನ್‌ ಟೂರ್ನಿಯ ಸೆಮಿಫೈನಲ್‌ನಲ್ಲಿ ಸೋತರು. ಇದರೊಂದಿಗೆ ಟೂರ್ನಿಯಲ್ಲಿ ಭಾರತದ ಅಭಿಯಾನಕ್ಕೆ ತೆರೆಬಿತ್ತು.

ಪುರುಷರ ಸಿಂಗಲ್ಸ್‌ನಲ್ಲಿ ಕನ್ನಡಿಗ ಆಯುಷ್‌ ಶೆಟ್ಟಿ 18-21, 17-21ರ ನೇರ ಗೇಮ್‌ಗಳಿಂದ ಸ್ಥಳೀಯ ನೆಚ್ಚಿನ ಆಟಗಾರ, ವಿಶ್ವದ ಏಳನೇ ಕ್ರಮಾಂಕದ ಚೌ ಟಿಯೆನ್ ಚೆನ್ ವಿರುದ್ಧ ಸೋಲು ಅನುಭವಿಸಿದರು.

20 ವರ್ಷ ವಯಸ್ಸಿನ ಆಯುಷ್‌ ಅವರು ಹಿಂದಿನ ಸುತ್ತುಗಳಲ್ಲಿ ಆಲ್ ಇಂಗ್ಲೆಂಡ್ ರನ್ನರ್ ಅಪ್ ಲೀ ಚಿಯಾ ಹಾವೊ, ಮಾಜಿ ವಿಶ್ವದ ಅಗ್ರಮಾನ್ಯ ಆಟಗಾರ ಕಿದಂಬಿ ಶ್ರೀಕಾಂತ್ ಮತ್ತು ಕೆನಡಾದ ಬ್ರಿಯಾನ್ ಯಂಗ್ ಅವರಿಗೆ ಆಘಾತ ನೀಡಿ ನಾಲ್ಕರ ಘಟ್ಟ ಪ್ರವೇಶಿಸಿದ್ದರು.

ADVERTISEMENT

ಇದಕ್ಕೂ ಮುನ್ನ ಮಹಿಳೆಯರ ಸಿಂಗಲ್ಸ್‌ನಲ್ಲಿ ಉನ್ನತಿ 19-21, 11-21ರಿಂದ ಅಗ್ರಶ್ರೇಯಾಂಕದ ಟೊಮೊಕಾ ಮಿಯಾಜಾಕಿ (ಜಪಾನ್‌) ಅವರಿಗೆ ಶರಣಾದರು. ಮೊದಲ ಗೇಮ್‌ನ ಒಂದು ಹಂತದಲ್ಲಿ 11–6ರ ಮುನ್ನಡೆ ಸಾಧಿಸಿದ್ದ ಭಾರತದ ಆಟಗಾರ್ತಿ ನಂತರ ಲಯ ತಪ್ಪಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.