ADVERTISEMENT

ಬ್ಯಾಡ್ಮಿಂಟನ್‌: ಆಯುಷ್‌ಗೆ ಪ್ರಶಸ್ತಿ ‘ಡಬಲ್‌’

​ಪ್ರಜಾವಾಣಿ ವಾರ್ತೆ
Published 20 ಮೇ 2019, 19:17 IST
Last Updated 20 ಮೇ 2019, 19:17 IST
ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ ಗೆದ್ದವರು (ನಿಂತವರು; ಎಡದಿಂದ) ಸಾತ್ವಿಕ್‌ ಶಂಕರ್‌, ಆಯುಷ್‌ ಶೆಟ್ಟಿ, ನೇಯ್ಸಾ ಕಾರ್ಯಪ್ಪ, ಗಾಯಿತ್ರಿ ರಾಣಿ, ಕಾರ್ಣಿಕಾ ಶ್ರೀ, ಜನನಿ ಅನಂತಕುಮಾರ್‌, ವಿ.ಸುಹಾಸ್‌, ಜಿ.ಜಯಂತ್, ಕಿಶಾಲ್ ಗಣಪತಿ, ಅಲ್ಫಿಯಾ ರಿಯಾಜ್‌ ಬಾಸರಿ ಮತ್ತು ಸಾಚಿ ನಿತಿನ್‌ ದೇಸಾಯಿ. (ಮಂಡಿಯೂರಿ ಕುಳಿತವರು) ವಿನೀತಾ ಭಟ್‌, ಅನುಷಾ ಬಾರಿಯಾ, ಎ.ಎಸ್‌.ಮೌನಿತಾ, ರುಜುಲಾ ರಾಮು, ಅವಿ ಬಾಸಕ್‌, ಓಂ ಮಾಕ, ಪಿ.ಕೆ.ಸಂಕೀರ್ತ್‌ ಮತ್ತು ಆದಿತ್ಯ ದಿವಾಕರ್‌ –ಪ್ರಜಾವಾಣಿ ಚಿತ್ರ

ಬೆಂಗಳೂರು: ಅಮೋಘ ಆಟ ಆಡಿದ ಆಯುಷ್‌ ಆರ್‌.ಶೆಟ್ಟಿ ಅವರು ಯಾದವ್‌ ಪ್ರೊ ಬ್ಯಾಡ್ಮಿಂಟನ್‌ ಅಕಾಡೆಮಿ ಆಶ್ರಯದ ಸಬ್‌ಜೂನಿಯರ್‌ ರಾಜ್ಯ ರ‍್ಯಾಂಕಿಂಗ್‌ ಟೂರ್ನಿಯಲ್ಲಿ ಪ್ರಶಸ್ತಿ ‘ಡಬಲ್’ ಸಾಧನೆ ಮಾಡಿದ್ದಾರೆ.

ಆಯುಷ್‌ ಅವರು 15 ವರ್ಷದೊಳಗಿನ ಬಾಲಕರ ಸಿಂಗಲ್ಸ್‌ ಮತ್ತು ಡಬಲ್ಸ್‌ ವಿಭಾಗಗಳಲ್ಲಿ ಟ್ರೋಫಿಗೆ ಮುತ್ತಿಕ್ಕಿದ್ದಾರೆ.

15 ವರ್ಷದೊಳಗಿನವರ ಬಾಲಕಿಯರ ಸಿಂಗಲ್ಸ್‌ನಲ್ಲಿ ನೇಯ್ಸಾ ಕಾರ್ಯಪ್ಪ ಚಾಂಪಿಯನ್‌ ಆಗಿದ್ದಾರೆ.

ADVERTISEMENT

ಸಿಂಗಲ್ಸ್‌ ವಿಭಾಗದ ಫೈನಲ್‌ನಲ್ಲಿ ಅಗ್ರಶ್ರೇಯಾಂಕದ ಆಟಗಾರ ಆಯುಷ್‌ 21–17, 21–10 ನೇರ ಗೇಮ್‌ಗಳಿಂದ ಆರುಜ್‌ ಮಹೇಶ್ವರಿ ಅವರನ್ನು ಸೋಲಿಸಿದರು.

ಡಬಲ್ಸ್‌ ವಿಭಾಗದ ಪ್ರಶಸ್ತಿ ಸುತ್ತಿನ ಪೈಪೋಟಿಯಲ್ಲಿ ಆಯುಷ್‌ ಮತ್ತು ಸಾತ್ವಿಕ್‌ ಶಂಕರ್‌ 21–17, 21–17ರಲ್ಲಿ ಅಗ್ರಶ್ರೇಯಾಂಕದ ಆರುಜ್‌ ಮತ್ತು ಜಿ.ಎಸ್‌.ಸುಮುಖ್‌ ಅವರಿಗೆ ಆಘಾತ ನೀಡಿದರು.

ಬಾಲಕಿಯರ ಸಿಂಗಲ್ಸ್‌ ಫೈನಲ್‌ನಲ್ಲಿ ಅಗ್ರಶ್ರೇಯಾಂಕದ ಆಟಗಾರ್ತಿ ನೇಯ್ಸಾ 21–10, 19–21, 21–14ರಲ್ಲಿ ಕಾರ್ಣಿಕಾ ಶ್ರೀ ಅವರನ್ನು ಮಣಿಸಿದರು.

ಡಬಲ್ಸ್‌ ವಿಭಾಗದ ಫೈನಲ್‌ನಲ್ಲಿ ನೇಯ್ಸಾ ಮತ್ತು ಆಶಿತಾ ಸಿಂಗ್ 18–21, 21–19, 12–21ರಲ್ಲಿ ಕಾರ್ಣಿಕಾ ಮತ್ತು ಗಾಯತ್ರಿ ರಾಣಿ ಜೈಸ್ವಾಲ್‌ ಎದುರು ಶರಣಾದರು.

17 ವರ್ಷದೊಳಗಿನವರ ಬಾಲಕರ ಸಿಂಗಲ್ಸ್‌ ವಿಭಾಗದ ಪ್ರಶಸ್ತಿಯು ಆದಿತ್ಯ ದಿವಾಕರ್‌ ಅವರ ಪಾಲಾಯಿತು.

ಫೈನಲ್‌ನಲ್ಲಿ ಮೂರನೇ ಶ್ರೇಯಾಂಕದ ಆಟಗಾರ ದಿವಾಕರ್‌ 21–13, 21–19ರಲ್ಲಿ ಎರಡನೇ ಶ್ರೇಯಾಂಕದ ಆಟಗಾರ ಜಿ.ಜಯಂತ್‌ ಅವರನ್ನು ಪರಾಭವಗೊಳಿಸಿದರು.

ಬಾಲಕಿಯರ ಸಿಂಗಲ್ಸ್‌ ವಿಭಾಗದ ಪ್ರಶಸ್ತಿ ಸುತ್ತಿನ ಹಣಾಹಣಿಯಲ್ಲಿ ವರ್ಷಾ ವಿನೀತಾ ಭಟ್‌ 21–15, 21–18ರಲ್ಲಿ ಆಶಿತಾ ಸಿಂಗ್‌ ಎದುರು ಗೆದ್ದರು.

13 ವರ್ಷದೊಳಗಿನ ಬಾಲಕರ ಸಿಂಗಲ್ಸ್‌ ಫೈನಲ್‌ನಲ್ಲಿ ಅವಿ ಬಾಸಕ್‌ 21–13, 14–21, 21–12ರಲ್ಲಿ ಎಂ.ಡಿ.ಕಶ್ಯಪ್‌ ನಂಜಪ್ಪ ಅವರನ್ನು ಮಣಿಸಿದರು.

ಬಾಲಕಿಯರ ಸಿಂಗಲ್ಸ್‌ ಫೈನಲ್‌ನಲ್ಲಿ ರುಜುಲಾ ರಾಮು 21–13, 21–8ರಲ್ಲಿ ಜಿ.ಎಸ್‌.ಮೇಘಶ್ರೀ ಎದುರು ವಿಜಯಿಯಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.