ADVERTISEMENT

ಭಾರತದ ಬ್ಯಾಡ್ಮಿಂಟನ್‌ ತಂಡಗಳಿಗೆ ಚಿನ್ನ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2019, 2:02 IST
Last Updated 3 ಡಿಸೆಂಬರ್ 2019, 2:02 IST

ಪೋಖರಾ (ಪಿಟಿಐ): ಭಾರತದ ಪುರುಷರ ಮತ್ತು ಮಹಿಳೆಯರ ಬ್ಯಾಡ್ಮಿಂಟನ್‌ ತಂಡಗಳು ದಕ್ಷಿಣ ಏಷ್ಯನ್‌ ಕ್ರೀಡಾಕೂಟದಲ್ಲಿ ಚಿನ್ನದ ಸಾಧನೆ ಮಾಡಿವೆ.

ಸೋಮವಾರ ನಡೆದ ಪುರುಷರ ವಿಭಾಗದ ಫೈನಲ್‌ನಲ್ಲಿ ಕಿದಂಬಿ ಶ್ರೀಕಾಂತ್‌ ನೇತೃತ್ವದ ತಂಡ 3–1ಯಿಂದ ಶ್ರೀಲಂಕಾವನ್ನು ಮಣಿಸಿತು.

ಮಹಿಳಾ ವಿಭಾಗದ ಫೈನಲ್‌ನಲ್ಲಿ ಭಾರತ 3–0ಯಿಂದ ಶ್ರೀಲಂಕಾ ವಿರುದ್ಧ ಗೆದ್ದಿತು.

ADVERTISEMENT

ಟೇಕ್ವಾಂಡೊ ಸ್ಪರ್ಧೆಯಲ್ಲಿ ಭಾರತ, ಎರಡು ಚಿನ್ನ ಸೇರಿದಂತೆ ಒಟ್ಟು ಒಂಬತ್ತು ಪದಕಗಳನ್ನು ಕೊರಳಿಗೇರಿಸಿಕೊಂಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.