ಕಿದಂಬಿ ಶ್ರೀಕಾಂತ್
ಕ್ಯಾಲ್ಗರಿ: ಚೀನಾ ತೈಪೆಯ ವಾಂಗ್ ಪೊ–ವೀ ಅವರನ್ನು ನೇರ ಗೇಮ್‌ಗಳಿಂದ ಸೋಲಿಸಿದ ಭಾರತದ ಕಿದಂಬಿ ಶ್ರೀಕಾಂತ್ ಅವರು ಕೆನಡಾ ಓಪನ್ ಸೂಪರ್ 300 ಬ್ಯಾಡ್ಮಿಂಟನ್ ಟೂರ್ನಿಯ ಕ್ವಾರ್ಟರ್‌ಫೈನಲ್ ಪ್ರವೇಶಿಸಿದರು.
2021ರ ವಿಶ್ವ ಚಾಂಪಿಯನ್‌ಷಿಪ್ ಬೆಳ್ಳಿ ವಿಜೇತ ಶ್ರೀಕಾಂತ್ ಗುರುವಾರ ನಡೆದ ಪಂದ್ಯದಲ್ಲಿ 21–19, 21–12 ರಿಂದ ವಿಶ್ವ ಕ್ರಮಾಂಕದಲ್ಲಿ 71ನೇ ಸ್ಥಾನದಲ್ಲಿರುವ ವಾಂಗ್ ಅವರ ಸವಾಲನ್ನು ಬದಿಗೊತ್ತಿದರು.
ಭಾರತದ ಆಟಗಾರನಿಗೆ ಎಂಟರ ಘಟ್ಟದ ಪಂದ್ಯದಲ್ಲಿ ಚೀನಾ ತೈಪೆಯ ಅಗ್ರ ಆಟಗಾರ ಚೌ ಟಿಯೆನ್ ಚೆನ್ ಅವರ ಸವಾಲು ಎದುರಾಗುವ ಸಾಧ್ಯತೆಯಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.